ಮೈಸೂರು

ಫೆ.1ರಂದು ನಡೆಯಬೇಕಿದ್ದ ಮಾದಿಗ ಜನಜಾಗೃತಿ ಸಮಾವೇಶಕ್ಕೆ ತಡೆ

ಅಸ್ತಿತ್ವದಲ್ಲಿಲ್ಲದ ಮಾದಿಗ ಸಂಘಟನೆಗಳ ಒಕ್ಕೂಟದ ಹೆಸರಿನಲ್ಲಿ ನಡೆಸಲು ಉದ್ದೇಶಿಸಿದ್ದ ‘ಮಾದಿಗ ಸಮಾಜದ ಸಾಮಾಜಿಕ ನ್ಯಾಯಕ್ಕಾಗಿ ಜನಜಾಗೃತಿ ಸಮಾವೇಶ’ವನ್ನು ರದ್ದುಗೊಳಿಸಲಾಗಿದೆ ಎಂದು ದಲಿತ ಬಹುಜನ ಚಳುವಳಿ ಜಿಲ್ಲಾಧ್ಯಕ್ಷ ಎಸ್.ಮಂಜುನಾಥ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಮಾದಿಗ ಜನಾಂದೋಲನ ವೇದಿಕೆ ವತಿಯಿಂದ ಪತ್ರಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಫೆ.1ರ ಬುಧವಾರ ಆಯೋಜಿಸಿದ್ದ ಸಮಾವೇಶವನ್ನು ಅಸ್ತಿತ್ವದಲ್ಲಿಯೇ ಇರದ ಮಾದಿಗ ಸಮುದಾಯ ಒಕ್ಕೂಟದ ಹೆಸರಿನಲ್ಲಿ  ಹಮ್ಮಿಕೊಂಡಿರುವುದು ಆಶ್ಚರ್ಯ ತರಿಸಿತ್ತು. ಮಾದಿಗ ಸಮುದಾಯಕ್ಕೆ ಒಳಮೀಸಲಾತಿ ಪಡೆದುಕೊಳ್ಳಲು ಸುದೀರ್ಘ ಕಾಲದಿಂದ ಹೋರಾಟ ಮಾಡುತ್ತಿದ್ದು, ಅದಕ್ಕೊಂದು ಹಿನ್ನೆಲೆ ಇದೆ. ಆದರೆ ಮಾದಿಗ ಸಮುದಾಯದ ಹೆಸರಿನಲ್ಲಿ ಗೊಂದಲ ಹುಟ್ಟಿಸುವ ರೀತಿಯಲ್ಲಿ ಸಮಾವೇಶ ಆಯೋಜನಗೆ ಮುಂದಾಗಿದ್ದರಿಂದ ಸಮುದಾಯದ ಮುಖಂಡರು ಮಧ್ಯ ಪ್ರವೇಶಿಸಿ ಗೊಂದಲ ಬಗೆಹರಿಯುವವರೆಗೆ ಸಮಾವೇಶವ ನಡೆಯಂದತೆ ತಡೆ ಒಡ್ಡಿದ್ದಾರೆ ಎಂದು ತಿಳಿಸಿದರು.

ಸಮುದಾಯದ ಜನಪ್ರತಿನಿಧಿಗಳಾದ ಸಿ.ರಮೇಶ್, ಕೆ.ಹೆಚ್.ಮುನಿಯಪ್ಪ, ಕೃಷ್ಣ, ಎಂ.ಶಿವಣ್ಣ ಸೇರಿದಂತೆ ಇತರೆ ಮುಖಂಡರ ಗಮನಕ್ಕೆ ತಾರದೇ ಸಮಾವೇಶವನ್ನು ಆಯೋಜಿಸಲಾಗಿತ್ತು. ಆದ ಕಾರಣ ರದ್ದುಗೊಳಿಸಲಾಯಿತು ಎಂದರು.

ಸಮಾಜದ ಹಿರಿಯರ ಸಮ್ಮುಖದಲ್ಲಿ ಚರ್ಚಿಸಿ ರದ್ದುಗೊಳಿಸಲಾಗಿದ್ದು ಮುಂದಿನ ಹೋರಾಟದ ರೂಪರೇಷೆಯನ್ನು ಆದಷ್ಟು ಶೀಘ್ರ ತೀರ್ಮಾನಿಸಲಾಗುವುದು ಎಂದ ಅವರು, ನಂಜನಗೂಡಿನಲ್ಲಿ ನಡೆಯಲಿರುವ ವಿಧಾನಸಭಾ ಉಪಚುನಾವಣೆಯಲ್ಲಿ  ಹಿಂದುಳಿದ ವರ್ಗಗಳ ರಾಜ್ಯ ಘಟಕದ ಅಧ್ಯಕ್ಷ ಎನ್.‍ಮಂಜುನಾಥ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್‍ ನೀಡಬೇಕೆಂದು ಆಗ್ರಹಿಸಿದರು.

ಒಳಮೀಸಲಾತಿ ಜಾರಿಗಾಗಿ ಒತ್ತಾಯಿಸಿ ಹಾಗೂ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಹಲವಾರು ವರ್ಷಗಳಿಂದಲೂ ಹೋರಾಟ ನಡೆಸಲಾಗುತ್ತಿದೆ. ಸರ್ಕಾರ ತಲೆಕಡೆಸಿಕೊಳ್ಳದೆ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಕಳೆದ ಡಿ.11ರಂದು ಹುಬ್ಬಳ್ಳಿಯ ಬೃಹತ್ ಮಾದಿಗ ಸಮಾವೇಶದಲ್ಲಿಯೂ ಹಾಗೂ “ಹೈದ್ರಾಬಾದ್ ಚಲೋ” ಮಾದಿಗರ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಅವರು ಮಾದಿಗರ ನೇತೃತ್ವದಲ್ಲಿ ನಡೆದ ರಾಷ್ಟ್ರೀಯ ಸಮಾವೇಶದಲ್ಲೂ ಒಳಮೀಸಲಾತಿಗೆ ಒತ್ತಾಯಿಸಲಾಗಿತ್ತು. ಆದರೆ ಸರ್ಕಾರ ಈ ಬಗ್ಗೆ ಕ್ರಮ ಜರುಗಿಸದೆ ನಿರ್ಲಕ್ಷ್ಯ ಧೋರಣೆ ಪ್ರದರ್ಶಿಸುತ್ತಿರುವುದು ಖಂಡನಾರ್ಹ ಎಂದರು.

ನಗರಪಾಲಿಕೆ ಮಾಜಿ ಸದಸ್ಯ ಆರ್.ಸುನಂದ ಕುಮಾರ್, ಜೆಡಿಎಸ್ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಎಂ.ಶಿವಮೂರ್ತಿ, ಕರ್ನಾಟಕ ಚಮ್ಮಾರ ಮಹಾಸಭೆ ಜಿಲ್ಲಾಧ್ಯಕ್ಷ ಬಿ.ಬಸಪ್ಪ, ನ್ಯಾಯವಾದಿಗಳಾದ ಎಸ್.ರಾಜು, ಶಿವಕುಮಾರ್, ಎಂಸಿಡಿಸಿಸಿಡಬ್ಲ್ಯೂ ನಿರ್ದೇಶಕ ಎನ್.ಮಂಜುನಾಥ್, ಎನ್.ಕೃಷ್ಣ, ಬಿಜೆಪಿ ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಜೆ.ಸಿ.ಇತಿಹಾಸ್ ಹಾಗೂ ಕಾಳಯ್ಯ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: