ಮೈಸೂರು

ದಸರಾ ಕ್ರೀಡಾಕೂಟ ಉದ್ಘಾಟನೆಗೆ ಒಲಂಪಿಕ್ ವಿಜೇತರು?: ಸಜ್ಜುಗೊಳ್ಳುತ್ತಿದೆ ಚಾಮುಂಡಿವಿಹಾರ ಕ್ರೀಡಾಂಗಣ

ಕಳೆದ ಬಾರಿ ಮೈಸೂರು ದಸರಾ ಚೆನ್ನಾಗಿಯೇ ನಡೆದರೂ ಅಷ್ಟೊಂದು ಕಳೆಗಟ್ಟಿರಲಿಲ್ಲ. ಬರಗಾಲದ ಹಿನ್ನೆಲೆಯಲ್ಲಿ ಪ್ರಮುಖ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಆದರೆ ಈ ಬಾರಿ ಎಲ್ಲ ರಸದೌತಣಗಳನ್ನೂ ಜನತೆ ಸವಿಯಬಹುದು.

ಕಳೆದ ವರ್ಷ ಪ್ರಮುಖ ಆಕರ್ಷಣೆಗಳಾದ ಆಹಾರಮೇಳ, ಕ್ರೀಡಾಕೂಟ, ಯುವಜನೋತ್ಸವ ನಡೆಸಲಾಗಿರಲಿಲ್ಲ. ಇಲ್ಲಿನ ಜನತೆ ಹಾಗೂ ಪ್ರವಾಸಿಗರು ಇವುಗಳಿಂದ ವಂಚಿತರಾಗಿದ್ದರು. ಆದರೆ ಈ ಬಾರಿ ಆಹಾರಮೇಳವೂ ಭರ್ಜರಿಯಾಗಿಯೇ ನಡೆಯಲಿದೆ. ಜೊತೆಯಲ್ಲಿ ಕ್ರೀಡಾಪ್ರೇಮಿಗಳಿಗೆ ಕ್ರೀಡಾಕೂಟವೂ ತೆರೆದುಕೊಳ್ಳಲಿದೆ. ಕಳೆದ ಬಾರಿ ಕ್ರೀಡಾಕೂಟ ನಡೆದಿತ್ತಾದರೂ ಅದು ಕೇವಲ ರೈತ ಓಟಕ್ಕೆ ಮಾತ್ರ ಸೀಮಿತವಾಗಿತ್ತು. ಈ ಬಾರಿ ರಿಯೋ ಒಲಂಪಿಕ್‍ನಲ್ಲಿ ಪಾಲ್ಗೊಂಡು ಅಪಾರ ಜನಪ್ರಿಯತೆ ಗಳಿಸಿರುವ ಸಾಕ್ಷಿ, ಸಿಂಧು ಹಾಗೂ ದೀಪಾ ಕರ್ಮಾಕರ್ – ಈ ಮೂವರ ಹೆಸರು ಕ್ರೀಡಾಕೂಟ ಉದ್ಘಾಟನೆಗೆ ಕೇಳಿ ಬಂದಿದೆ.

ಆದರೆ ಈ ಮೂವರಲ್ಲಿ ಯಾರು ಪಾಲ್ಗೊಳ್ಳಬಹುದು ಎಂದು ಇನ್ನೂ ನಿಖರ ಮಾಹಿತಿ ಲಭಿಸಿಲ್ಲ. ಕ್ರೀಡಾಕೂಟಕ್ಕೆ ಪೂರಕವಾಗಿ ನಜರಾಬಾದ್ ಸಮೀಪ 32 ಎಕರೆ ಪ್ರದೇಶದಲ್ಲಿರುವ ಚಾಮುಂಡಿ ವಿಹಾರ ಕ್ರೀಡಾಂಗಣ ಸಜ್ಜುಗೊಳ್ಳುತ್ತಿದೆ. ಇಲ್ಲಿ ಈಗಾಗಲೇ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳು ಭಾಗವಹಿಸಿ ತಮ್ಮ ಪ್ರತಿಭೆ ಮೆರೆದಿದ್ದಾರೆ. ಕ್ರೀಡಾಂಗಣದಲ್ಲಿ ಕೃತಕ ಹುಲ್ಲಿನ ಹಾಸು ಗಮನ ಸೆಳೆಯುತ್ತಿದೆ.

ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ಈಜು ಸ್ಪರ್ಧೆ ನಡೆಸಲು ಬೇಕಾಗಿರುವ ಎಲ್ಲ ರೀತಿಯ ಸೌಲಭ್ಯಗಳನ್ನೊಳಗೊಂಡ ಸುಸಜ್ಜಿತ ಅಂತಾರಾಷ್ಟ್ರೀಯ

ಈಜುಕೊಳ ನಿರ್ಮಾಣಗೊಂಡಿದೆ. ರಿಯೋ ಒಲಂಪಿಕ್  ವಿಜೇತ ಕ್ರೀಡಾಳುಗಳು ಉದ್ಘಾಟನೆಗೆ ಆಗಮಿಸಿದರಂತೂ ದಸರಾ ಕ್ರೀಡಾಕೂಟಕ್ಕೆ ಇನ್ನಷ್ಟು ಮೆರಗು ಬರಲಿದೆ.

ಒಟ್ಟಿನಲ್ಲಿ ಈ ಬಾರಿಯ ದಸರಾ ಎಲ್ಲ ರೀತಿಯಲ್ಲಿಯೂ ಮಹತ್ವವನ್ನು ಪಡೆದುಕೊಂಡು ಜನತೆಯನ್ನು ಆಕರ್ಷಿಸುವುದರಲ್ಲಿ ಸಂದೇಹವಿಲ್ಲ.

Leave a Reply

comments

Related Articles

error: