ಕರ್ನಾಟಕಪ್ರಮುಖ ಸುದ್ದಿ

ಸಿದ್ದರಾಮಯ್ಯ, ಕುಮಾರಸ್ವಾಮಿಯವರೇ ಚೋರ್ ಯಾರು ಚೋಕಿದರ್ ಯಾರೆಂದು ಹೇಳಿ? ನಟ ಜಗ್ಗೇಶ್ ಪ್ರಶ್ನೆ

ಶಿವಮೊಗ್ಗ (ಏ.11): ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಮಗ ಲೋಕಸಭಾ ಅಭ್ಯರ್ಥಿ ಬಿವೈ ರಾಘವೇಂದ್ರ ಅವರ ಪರ ಅಬ್ಬರದ ಪ್ರಚಾರದಲ್ಲಿ ಸ್ಟಾರ್ ಪ್ರಚಾರಕರು ತೊಡಗಿದ್ದಾರೆ. ಇಂತಹ ಪ್ರಚಾರದಲ್ಲಿ ಭಾಗವಹಿಸಿದ್ದ ನಟ ಜಗ್ಗೇಶ್, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.

ಸಿದ್ದರಾಮಯ್ಯ, ಕುಮಾರಸ್ವಾಮಿಯವರೇ, ಚೋರ್ ಯಾರು, ಚೋಕಿದರ್ ಯಾರೆಂದು ಜನರಿಗೆ ಗೊತ್ತಿದೆ. ನೀವು ಅದನ್ನು ಮನವರಿಕೆ ಮಾಡಬೇಕಿಲ್ಲ. ಮೊದಲು ಆ ಬಗ್ಗೆ ಚೋರ್ ಯಾರು, ಚೋಕಿದರ್ ಯಾರೆಂದು ನೀವು ಹೇಳಿ ಎಂಬುದಾಗಿ ಪ್ರಶ್ನೆ ಮಾಡಿದರು. ಚೌಕಿದಾರ್ ಎಂಬ ಪದವನ್ನು ಪ್ರಧಾನಿಯವರು ಸುಮ್ಮನೇ ಇಟ್ಟುಕೊಂಡಿಲ್ಲ. ಚೌಕಿದಾರ್ ಅಂದ್ರೇ ಕಳ್ಳರನ್ನು, ಭ್ರಷ್ಠರನ್ನು ಹಿಡಿಯುವ ಅಧಿಕಾರಿ. ಈ ದೇಶದಲ್ಲಿರುವ ಕಳ್ಳರನ್ನು, ಭ್ರಷ್ಟರನ್ನು ಹಿಡಿದು ಜೈಲಿಗೆ ಅಟ್ಟುವ ಕೆಲಸವನ್ನು ಮಾಡುವ ಸಲುವಾಗಿದೇ ಮೋದಿಯವರು ಚೌಕಿದಾರ್ ಎಂಬ ಹೆಸರನ್ನು ಇಟ್ಟುಕೊಂಡಿದ್ದಾರೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಎಂತೆಂತಹ ಹಗರಣಗಳನ್ನು ಮಾಡಿದೆ. 2ಜಿ, 3ಜಿ ತರಂಗಾಂತ ವಿಸ್ತರಣೆಯಲ್ಲಿನ ಪ್ರಕರಣದಲ್ಲಿ ಯಾರೆಲ್ಲಾ ಇದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಮೊದಲು ನಿಮ್ಮ ಹಗರಣಗಳಿಂದ ಹೊರಬನ್ನಿ, ಆನಂತ್ರ ನಮ್ಮ ಬಿಜೆಪಿಯ ಬಗ್ಗೆ, ಪ್ರಧಾನಿ ಮೋದಿಯವರ ಬಗ್ಗೆ ಮಾತನಾಡಿ ಎಂದು ನಟ ಜಗ್ಗೇಶ್ ಕಿಡಿಕಾರಿದರು. (ಎನ್.ಬಿ)

Leave a Reply

comments

Related Articles

error: