ದೇಶಪ್ರಮುಖ ಸುದ್ದಿ

ಆರ್ಥಿಕ ಅಭಿವೃದ್ಧಿ ಬಗ್ಗೆ ಭಾರತ ಪಾರದರ್ಶಕವಾಗಿ ಇರಲೇಬೇಕು: ಐಎಂಎಫ್ ಮುಖ್ಯ ಆರ್ಥಿಕ ತಜ್ಞೆ

ಹೊಸದಿಲ್ಲಿ (ಏ.11): ಭಾರತದ ಅಂದಾಜು ಪ್ರಗತಿ ದರವನ್ನು 2019-20 ಹಾಗೂ 2020-21 ಆರ್ಥಿಕ ವರ್ಷಗಳಿಗೆ 20 ಬೇಸಿಸ್ ಪಾಯಿಂಟ್ ಗಳಷ್ಟು ಕಡಿತಗೊಳಿಸುವ ಮೂಲಕ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯ ಮುಖ್ಯ ಆರ್ಥಿಕ ತಜ್ಞೆ ಗೀತಾ ಗೋಪಿನಾಥ್ ಅವರು, ಭಾರತಕ್ಕೆ ಜಿಡಿಪಿ ಲೆಕ್ಕಾಚಾರದ ಬಗ್ಗೆ ಸಂದೇಶವೊಂದನ್ನು ನೀಡಿದ್ದಾರೆ.

ಭಾರತ ತನ್ನ ಪ್ರಗತಿ ದರವನ್ನು ಲೆಕ್ಕ ಹಾಕುವ ವಿಧಾನದಲ್ಲಿ ಇನ್ನೂ ಕೆಲ ಸಮಸ್ಯೆಗಳಿವೆ, ಹೊರಬರುತ್ತಿರುವ ಹೊಸ ಸಂಖ್ಯೆಗಳ ಮೇಲೆ ಐಎಂಎಫ್ ನಿಗಾ ಇಡಲಿದೆ ಎಂದು ಅವರು ಹೇಳಿದ್ದಾರೆ. ”ಭಾರತದಲ್ಲಿನ ನಮ್ಮ ಸಹೋದ್ಯೋಗಿಗಳೊಂದಿಗೆ ನಾವು ಸತತ ಸಂಪರ್ಕದಲ್ಲಿದ್ದು ಭಾರತ ಪ್ರಕಟಿಸುವ ಹೊಸ ಅಂಕಿಸಂಖ್ಯೆಗಳ ಬಗ್ಗೆ ನಂತರ ನಿರ್ಧಾರ ಕೈಗೊಳ್ಳುತ್ತೇವೆ,” ಎಂದಿದ್ದಾರೆ.

ಜಿಡಿಪಿ ಲೆಕ್ಕಾಚಾರ ಪ್ರಕ್ರಿಯೆಯಲ್ಲಿ ಹಾಗೂ ಬೇಸ್ ಇಯರ್’ನಲ್ಲಿ 2015ರಲ್ಲಿ ಮಾಡಲಾದ ಬದಲಾವಣೆಗಳನ್ನು ಸ್ವಾಗತಿಸಿದ ಗೀತಾ ಗೋಪಿನಾಥ್ ಅದೇ ಸಮಯ ನಿಜವಾದ ಜಿಡಿಪಿ ಲೆಕ್ಕಾಚಾರ ನಡೆಸಲು ‘ಡಿಫ್ಲೇಟರ್’ ಬಳಕೆ ಬಗ್ಗೆ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಜಾಗತಿಕವಾಗಿ ಭಾರತ ತಾನು ಹೊಂದಿರುವ ಮಹತ್ವದ ಸ್ಥಾನವನ್ನು ಪರಿಗಣಿಸಿ ಅದು ತನ್ನ ಅಂಕಿಸಂಖ್ಯೆಗಳ ಬಗ್ಗೆ ಹೆಚ್ಚು ಪಾರದರ್ಶಕತೆಯಿಂದ ವಿವರಗಳನ್ನು ನೀಡಬೇಕು ಎಂದು ಗೋಪಿನಾಥ್ ತಿಳಿಸಿದ್ದಾರೆ.

”ಭಾರತವು 2019 ಹಾಗೂ 2020ರಲ್ಲಿ ಶೇ 7ಕ್ಕಿಂತಲೂ ಹೆಚ್ಚಿನ ಪ್ರಗತಿ ದಾಖಲಿಸಲಿದೆ ಎಂಬ ಅಂದಾಜಿದೆ ಹಾಗೂ ಹೀಗಾದಲ್ಲಿ ಅದು ವಿಶ್ವದಲ್ಲಿಯೇ ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವ ಆಥಿಕತೆಯಾಗಲಿರುವುದರಿಂದ ದೇಶವು ಬಿಡುಗಡೆ ಮಾಡುವ ಅಂಕಿಸಂಖ್ಯೆಗಳ ವಿಚಾರದಲ್ಲಿಯೂ ಪಾರದರ್ಶಕತೆ ಇರಬೇಕು ಎಂದು ಅವರು ಹೇಳಿದ್ದಾರೆ.

ಫೆಬ್ರವರಿಯಲ್ಲಿ ಭಾರತ ಸರಕಾರವು 2016-17 ಹಾಗೂ 2017-18ಗೆ ಜಿಡಿಪಿ ದತ್ತಾಂಶವನ್ನು ಪರಿಷ್ಕರಿಸಿರುವ ಹಿನ್ನೆಲೆಯಲ್ಲಿ ಗೀತಾ ಗೋಪಿನಾಥ್ ಪ್ರತಿಕ್ರಿಯೆ ಬಂದಿದೆ. ಆರ್ಥಿಕ ವರ್ಷ 2016-17ಗೆ ಜಿಡಿಪಿಯನ್ನು ಶೇ 7.1ರಿಂದ ಶೇ 8.2ಗೆ ಏರಿಸಲಾಗಿದ್ದು ಮೋದಿ ಸರಕಾರದ ಆಡಳಿತದಲ್ಲಿನ ಅತ್ಯಧಿಕ ಪ್ರಗತಿ ಪ್ರಮಾಣ ದಾಖಲಾದ ವರ್ಷ ಅದಾಗಲು ಇದು ಸಹಕಾರಿಯಾಗಿದೆ. ಇದೇ ವರ್ಷ ಭಾರತ ನೋಟು ಅಮಾನ್ಯೀಕರಣ ಕ್ರಮ ಕೂಡ ಕೈಗೊಂಡಿದ್ದನ್ನು ಇಲ್ಲಿ ಉಲ್ಲೇಖಿಸಬಹುದು. (ಎನ್.ಬಿ)

Leave a Reply

comments

Related Articles

error: