ಮೈಸೂರು

ಏ.13 : ಮಾನವ ಸರಪಳಿ ಮೂಲಕ ಮತ ಜಾಗೃತಿ

ಮೈಸೂರು,ಏ.12:- ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಮೈಸೂರಿನ ಗೋಕುಲಂ ನಲ್ಲಿರುವ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ವತಿಯಿಂದ ಏಪ್ರಿಲ್ 13 ರಂದು ಬೆಳಿಗ್ಗೆ 10.30 ಕ್ಕೆ  500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಂದ  ಮಾನವ ಸರಪಳಿ ನಿರ್ಮಿಸುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಹಣಾಧಿಕಾರಿ ಕೆ.ಜ್ಯೋತಿ ಅವರು ಕಾರ್ಯಕ್ರಮ ಉದ್ಘಾಟಿಸುವರು.
ಮತದಾನದ ಬಗ್ಗೆ ಸಂದೇಶ ಸಾರಲು  ಇಂಗ್ಲೀಷ್ ಭಾಷೆಯಲ್ಲಿ  ” APRIL 18 CAST YOUR VOTE “ ಎಂಬ ಸಾಲನ್ನು  ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳಿಂದ ಮಾನವ ಸರಪಳಿಯ ಮೂಲಕ ರಚನೆಯ ಮಾಡಲಾಗುವುದು.
ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಕಾಲೇಜಿನ ಆವರಣದಲ್ಲಿ ಏಪ್ರಿಲ್ 12 ರಿಂದ ಸೆಲ್ಫಿ ಬೂತ್ ತರೆಯಲಾಗುತ್ತಿದೆ. ವೋಟರ್ ಐಡಿ ಜೊತೆ  ಸೆಲ್ಫಿ ತೆಗೆದುಕೊಂಡ  ಚಿತ್ರಗಳನ್ನು  ಕಳುಹಿಸಿ ಮತದಾನ ಜಾಗೃತಿ ಮೂಡಿಸಲಾಗುವುದು.
ಕಾಲೇಜಿನ ಪ್ರಾಂಶುಪಾಲರು, ಕಾರ್ಯದರ್ಶಿಗಳು ಹಾಗೂ ಎಲ್ಲಾ ವಿಭಾಗದ ಮುಖ್ಯಸ್ಥರುಗಳು ಮತದಾನದ ಮಾಡಿ ಎಂಬ ಸಂದೇಶವುಳ್ಳ ವಿಡಿಯೋವನ್ನು  ತಯಾರಿಸಲಾಗುವುದು  ಎಂದು ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: