ಮೈಸೂರು

ಜಾಗತಿಕ ತಾಪಮಾನ ತಡೆಗೆ ಕೈತೋಟ ನಿರ್ಮಿಸಿ: ರೆವರೆಂಡ್ ಬೆಂಜಮಿನ್ ವಾಸ್

ಮೈಸೂರು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ಬೆಳೆಯುತ್ತಿರುವ ನಗರದ ಜಾಗತಿಕ ತಾಪಮಾನ ತಡೆಯಲು ನಗರವನ್ನು ಇನ್ನಷ್ಟು ಹಸಿರುಮಯಗೊಳಿಸುವುದೊಂದೇ ಸಿದ್ಧ ಸೂತ್ರವಾಗಿದ್ದು, ಪ್ರತಿಯೊಬ್ಬರೂ ಮನೆಯ ಮಹಡಿ ಮೇಲೆ ಹಾಗೂ ರಸ್ತೆ ಬದಿಗಳಲ್ಲಿ ಗಿಡ ನೆಟ್ಟು ಮರಗಳನ್ನು ಬೆಳೆಸಬೇಕು,  ಮೈಸೂರನ್ನು ಇನ್ನಷ್ಟು ಸುಂದರಗೊಳಿಸಬೇಕು ಎಂದು ರೆವರೆಂಡ್ ಬೆಂಜಮಿನ್ ವಾಸ್ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಗೋಕುಲಂನಲ್ಲಿರುವ ತಮ್ಮ ನಿವಾಸದಲ್ಲಿ ‘ಹಸಿರು ಪರದೆ ಅಥವಾ ಉಸಿರಾಡುವ ಗೋಡೆ’ ಎನ್ನುವ ಪರಿಕಲ್ಪನೆಯಲ್ಲಿ 65 ವಿವಿಧ ತಳಿಯ 10 ಸಾವಿರ ಗಿಡಗಳನ್ನು ಬೆಳೆಸಿದ್ದೇನೆ. ಮನೆಯ ಹೊರ ಆವರಣದಲ್ಲಿ ಮಾತ್ರವಲ್ಲದೆ ಒಳಾವರಣದಲ್ಲಿಯೂ ಗಿಡಗಳನ್ನು ಬೆಳೆಸಿದ್ದೇನೆ. ಇದರಿಂದಾಗಿ ಮನೆಯ ವಾತಾವರಣವೂ ತಂಪಾಗಿರುವುದಲ್ಲದೇ ಪಕ್ಷಿಗಳು ಆಗಮಿಸುವುದರಿಂದ ಕಿವಿಗೆ ಇಂಪು ದೊರೆಯುವುದು. ಗಿಡಗಳಿಗೆ ಸಾವಾಯುವ ಹಾಗೂ ಕೊಟ್ಟಿಗೆ ಗೊಬ್ಬರವನ್ನೇ ಉಪಯೋಗಿಸುವುದರಿಂದ ಫಲವತ್ತಾಗಿ ಬೆಳೆದಿವೆ. ಗಿಡ ಬೆಳೆಸಲು ಕುಂಡಗಳೇ ಅಗತ್ಯವಿಲ್ಲ. ವಿಶಾಲ ಜಾಗ ಬೇಕೆಂದಿಲ್ಲ. ಇರುವ ಜಾಗದಲ್ಲಿಯೇ ವರ್ಟಿಕಲ್ ಗಾರ್ಡನಿಂಗ್ ಮಾಡಿ ಖುಷಿಪಡಬಹುದು. ಗಿಡಗಳಿಂದ ಅಮ್ಲಜನಕವೂ ಯಥೇಚ್ಛವಾಗಿ ಲಭಿಸಲಿದ್ದು ಉತ್ತಮ ದೈಹಿಕ ಆರೋಗ್ಯ ಲಭ್ಯವಾಗುವುದಲ್ಲದೇ ಉದುರಿದ ಎಲೆಗಳಿಂದ ಗೊಬ್ಬರ ತಯಾರಿಸಬಹುದು ಎಂದು ತಿಳಿಸಿದರು. ಕೈತೋಟ ಬೆಳೆಸುವ ಬಗ್ಗೆ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

ವಿಜ್ಞಾನಿ ಹಾಗೂ ಲೇಖಕ ಡಾ.ಮಹದೇಶ್ವರ ಸ್ವಾಮಿ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: