ಪ್ರಮುಖ ಸುದ್ದಿವಿದೇಶ

ಸಾಮಾಜಿಕ ಜಾಲತಾಣದಲ್ಲಿ ಜಾಗತಿಕ ನಾಯಕರ ಪೈಕಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿ ಪಾಲು

ವಿದೇಶ(ನ್ಯೂಯಾರ್ಕ್)ಏ.12:- ಸಾಮಾಜಿಕ ಜಾಲತಾಣದಲ್ಲಿ ಜಾಗತಿಕ ನಾಯಕರ ಪೈಕಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಹೆಗ್ಗಳಿಕೆ ಪ್ರಧಾನಿ ನರೇಂದ್ರ ಮೋದಿಯವರ ಪಾಲಾಗಿದ್ದು, ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ವಿಶ್ವದ ಅತಿ ಸುಂದರ ಮಹಾರಾಣಿ ಎಂಬ ಹೆಗ್ಗಳಿಕೆಯ ಜೋರ್ಡಾನ್ ರಾಣಿ ರಾನಿಯಾ ಅಲ್ ಅಬ್ದುಲ್ಲಾ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದಿದ್ದಾರೆ.

ಮೋದಿಯವರ ಫೇಸ್ ಬುಕ್ ಪೇಜ್ ನಲ್ಲಿ 1.37ಕೋಟಿ ಹಿಂಬಾಲಕರು ಇದ್ದು, 4.35 ಕೋಟಿ ಲೈಕ್ಸ್ ಬಂದಿದೆ ಎಂದು ವಿಶ್ವದ ಸಂವಹನ ಏಜೆನ್ಸಿ ಬರ್ಸನ್ ಕೊಹ್ನ ಆ್ಯಂಡ್ ವುಲ್ಪೆ ತಿಳಿಸಿದೆ. ಫೇಸ್ ಬುಕ್ 2019ರ ಜಾಗತಿಕ ನಾಯಕರು ಎಂಬ ವಾರ್ಷಿಕ ವರದಿಯಲ್ಲಿ ಈ ವಿಚಾರ ಬಹಿರಂಗಗೊಂಡಿದೆ. ಎರಡನೇ ಸ್ಥಾನ ಪಡೆದಿರುವ ಟ್ರಂಪ್ ಅವರ ಅಧಿಕೃತ ಪೇಜ್ ಗೆ 2.3ಕೋಟಿ ಲೈಕ್ಸ್ ಬಂದಿವೆ. ಜೋರ್ಡಾನ್ ರಾಣಿ ರಾನಿಯಾ ಅಲ್ ಅಬ್ದುಲ್ಲಾ ಅವರ ಫೇಸ್ ಬುಕ್ ಪೇಜ್ ಗೆ 1.69ಕೋಟಿ ಲೈಕ್ಸ್ ಬಂದಿವೆ ಎನ್ನಲಾಗಿದೆ. (ಎಸ್.ಎಚ್)

Leave a Reply

comments

Related Articles

error: