ಕರ್ನಾಟಕ

ನಿಖಿಲ್ ಪರ ಮಳವಳ್ಳಿಯಲ್ಲಿ ಮತಯಾಚನೆ ಮಾಡಿದ ಡಿ.ಕೆ.ಶಿವಕುಮಾರ್

ಮಳವಳ್ಳಿ (ಏ.12): ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಅಧಿಕ ಮತ ನೀಡುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಮನವಿ ಮಾಡಿದರು. ತಾಲ್ಲಾಕಿನ ಹಲಗೂರು ಮತ್ತು ಹಾಡ್ಲಿಯಲ್ಲಿ ಮೈತ್ರಿ ಅಭ್ಯರ್ಥಿ ಪರ ರೋಡ್ ಶೋನಲ್ಲಿ ಪಾಲ್ಗೊಂಡು ಮಾತನಾಡಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರಿಗೆ ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಡಲಾಗಿದೆ ಅಲ್ಲಿಸ್ಪರ್ಧೆಬೇಡ ಎಂದು ಹೇಳಿದ್ದೆ ಆದರೆ ಅವರು ನನ್ನ ಮಾತನನ್ನು ಕೇಳಲಿಲ್ಲ ಎಂದರು.

ಮಂಡ್ಯ ಕ್ಷೇತ್ರವನ್ನು ಬಿಟ್ಟು ಬೆಂಗಳೂರು ಕ್ಷೇತ್ರದಲ್ಲಿ ನಿಲ್ಲುವಂತೆ ನಾನು ಹಾಗೂ ಸಿ,ಎಂ ಕುಮಾರಸ್ವಾಮಿ ತಿಳಿಸಿದೆವು ಇಲ್ಲದಿದ್ದರೆ ಎಂ,ಎಲ್,ಸಿ ಮಾಡುವ ಭರವಸೆ ನೀಡಿದ್ದವು ಆದರೆ ಅವರು ಮಂಡ್ಯದಲ್ಲಿಯೇ ಸ್ಪರ್ಧೆಮಾಡುವೆ ಎಂದರು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿರುವ ಅವರಿಗೆ ಮತ ನೀಡಬೇಡಿ ಎಂದು ಹೇಳಿದರು.

ಬಿಜೆಪಿ ನಾಯಕರು ಅಚ್ಛೆದಿನ್ ಬರುತ್ತದೆ ಎಂದು ಹೇಳಿದ್ದರು ಅಚ್ಛೆದಿನ್ ಯಾರಿಗಾದ್ರೂ ಬಂತಾ ಸರ್ಕಾರಿ ಬೇಡ ಖಾಸಗಿ ನೌಕರಿಕೊಡ್ತಾ, ಪೆಟ್ರೋಲ್ ಬೆಲೆ ಏನಾಯ್ತು ಸಿಮೆಂಟ್ ಕಬ್ಬಿಣದ ಬೆಲೆ ಏನಾಗಿದೆ ಹೇಳಿ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು, ಮಳವಳ್ಳಿ ಮತ್ತು ಕನಕಪುರದ ಕೆರೆಗಳನ್ನು ತುಂಬಿಸುವ ಕೆಲಸಕ್ಕೆ ಪ್ರಯತ್ನಮಾಡುತ್ತಿದ್ದೇವೆ ಮನೆ ಬಾಗಿಲು ಬೆಳಕಾಗಿರಲು ಎಲ್ಲರೂ ಮೈತ್ರಿ ಅಭ್ಯರ್ಥಿ ನಿಖಿಲ್‍ಕುಮಾರಸ್ವಾಮಿಯನ್ನು ಗೆಲುವಿಗೆ ಸಹಕಾರ ನೀಡಿ ಎಂದು ಕೋರಿದರು.

ಬಿಜೆಪಿ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರಾದ ಅಡ್ವಾಣಿ,ತೇಜಸ್ವಿನಿ ಅನಂತಕುಮಾರ್ ಸುಮಿತ್ರಮಹಾಜನ್ ಅವರನ್ನು ಮೂಲೆಗುಂಪು ಮಾಡಿರುವ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ದೂರ ಇಡಬೇಕು ಎಂದು ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಹಲವಾರು ಚುನಾವಣೆಯಲ್ಲಿ ಮುಖಾಮುಖಿ ಆಗಿವೆ ಆದರೆ ಈಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರು ಇಡಬೇಕೆಂದು ರಾಹುಲ್ ಗಾಂಧಿ ತೀರ್ಮಾನಕ್ಕೆ ಬದ್ದವಾಗಿ ನಿಮ್ಮ ಮಂದೆ ನಿಂತಿದ್ದೀವಿ ಬಿಜೆಪಿಯನ್ನು ದೂರು ಇಟ್ಟಿದ್ದರಿಂದ ಉತ್ತರ ಕರ್ನಾಟಕದ ಜನತೆ ಈಗಲೂ ಸಮ್ಮಿಶ್ರ ಸರ್ಕಾರದ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ ಎಂದರು.

ಅಭಿಮಾನಿಗಳು ಕ್ರೇನ್ ಮೂಲಕ ಸೇಬಿನ ಹಣ್ಣಿನ ಬೃಹತ್ ಹಾರ ಹಾಕಿ ಸಚಿವ ಶಿವಕುಮಾರ ಅವರನ್ನು ಸನ್ಮಾನಿಸಿದರು, ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಗಂಗಾಧರ್, ಡಾ.ಮೂರ್ತಿ, ಹಿಂದುಳಿ ವರ್ಗದ ಅಧ್ಯಕ್ಷ ಡಿ, ಜಯರಾಮು, ಮುಂತಾದವರು ಉಪಸ್ಥಿತರಿದ್ದರು. (ಎನ್.ಬಿ)

Leave a Reply

comments

Related Articles

error: