ಮೈಸೂರು

ಭಾವನೆ, ಭಾವ ಎರಡೂ ಬೇರೆ : ಅಪರ ಜಿಲ್ಲಾಧಿಕಾರಿ ವೆಂಕಟೇಶ್

ಭಾವನೆ ಹಾಗೂ ಭಾವ ಎರಡೂ ಬೇರೆಯಾಗಿದ್ದು, ನಮ್ಮ ಜೀವನ ಶೈಲಿಯಲ್ಲಿ ಇದು ನಿತ್ಯವೂ ನಡೆಯುತ್ತಿರುತ್ತದೆ ಎಂದು ಮೈಸೂರು ಅಪರ ಜಿಲ್ಲಾಧಿಕಾರಿ ವೆಂಕಟೇಶ್ ತಿಳಿಸಿದರು.

ಮೈಸೂರಿನ ಚಾಮರಾಜೇಂದ್ರ ಸರ್ಕಾರಿ ದೃಶ್ಯ ಕಲಾ ಕಾಲೇಜಿನಲ್ಲಿ ಕಾಲೇಜು ವಿದ್ಯಾರ್ಥಿಗಳು ರಚಿಸಿರುವ ನಿಸರ್ಗ ಚಿತ್ರಕಲಾ ಪ್ರದರ್ಶನವನ್ನು ವೆಂಕಟೇಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕಾವ ವಿದ್ಯಾರ್ಥಿಗಳು ನಿಜವಾದ ಕಲಾವಿದರು. ಇಲ್ಲಿ ಕಲಿಯುತ್ತಿರುವವರು ಬದುಕುವ ಕಲೆಯನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ ಎಂದು ತಿಳಿಸಿದರು. ಇದೇ ವೇಳೆ ಕವಿ ದ.ರಾ.ಬೇಂದ್ರೆ ಹಾಗೂ ವಿವೇಕಾನಂದರನ್ನು ನೆನಪಿಸಿಕೊಂಡರು.

ಕಾರ್ಯಕ್ರಮದಲ್ಲಿ ಶಿಲ್ಪಕಲಾ ಉಪನ್ಯಾಸಕ ದೀಪಕ್ ಕೆ.ಜೆ. ಕಾವಾ ಡೀನ್ ಬಸವರಾಜ ಮುಸಾವಳಗಿ ಮತ್ತಿತರರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳು  ರಚಿಸಿದ ಹಂಪಿ ವಿರೂಪಾಕ್ಷ ದೇವಸ್ಥಾನ, ಮಹಾಕೂಟ ದೇವಾಲಯ, ಸಾಸಿವೆಕಾಳು ಮತ್ತು ಕಡಲೆಕಾಳು ಗಣೇಶ, ಕೃಷ್ಣದಾವಾಲಯ, ಮಹಾನವಮಿ ದಿಬ್ಬ, ಕಮಲ್ ಮಹಲ್, ವಿಜಯವಿಠಲ ದೇವಾಲಯ, ಬೀದರ್ ಕೋಟೆ, ನರಸಿಂಹ ಝರನಾ, ರಂಗಿನ ಮಹಲ್ ಸೇರಿದಂತೆ ಹಲವು ವಿವಿಧ ಚಿತ್ರಕಲೆಗಳು ಗಮನ ಸೆಳೆಯುತ್ತಿವೆ.

Leave a Reply

comments

Related Articles

error: