ಕರ್ನಾಟಕಪ್ರಮುಖ ಸುದ್ದಿ

ಸೈನಿಕರ ಬಗ್ಗೆ ಹೇಳಿಕೆ: ಸಿಎಂ ಕನ್ನಡ ಬರದಿದ್ರೆ ಸಿದ್ದು ಮೇಷ್ಟ್ರನ್ನ ಕೇಳಲಿ ಎಂದ ಬಿಜೆಪಿ

ಬೆಂಗಳೂರು (ಏ.12): ತಾವು ಸೈನಿಕರನ್ನು ಅವಹೇಳಿನ ಮಾಡಿದ ವಿಡಿಯೋ ನಕಲಿಯಾಗಿದ್ದು, ಅದನ್ನು ಬಿಜೆಪಿಯೇ ಬೇಕೆಂದೇ ಸಿದ್ಧಪಡಿಸಿದೆ ಎಂಬ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಬಿಜೆಪಿ, ಕನ್ನಡ ಅರ್ಥವಾಗದಿದ್ದರೆ ಮೇಷ್ಟು ಸಿದ್ದರಾಮಯ್ಯ ಅವರ ಬಳಿ ಕೇಳಿ ಎಂದು ಲೇವಡಿ ಮಾಡಿದೆ.

ಆ ಗಡಿ ಕಾಯೋರು, ಶ್ರೀಮಂತರ ಮಕ್ಕಳಲ್ಲ. ಬಡವರ ಮಕ್ಕಳು, ಎರಡ್ಹೊತ್ತಿನ ಊಟಕ್ಕೆ ಗತಿ ಇಲ್ಲದೆ, ಕೆಲಸ ಇಲ್ಲದೆ ಕೊನೆಗೆ ಸೇನೆ ಸೇರಿರೋರು, ಅಂಥವರ ಬಾಳಿನ ಜೊತೆ ಚೆಲ್ಲಾಟ ಆಡುವ ಪ್ರಧಾನಿ ಇವರು ಎಂದು ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ನಡೆದ ಸಾರ್ವಜನಿಕ ಸಭೆಯೊಂದರಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದ್ದರು.

ನಂತರ ಈ ವಿಡಿಯೋ ನಕಲಿಯಾಗಿದ್ದು, ಬಿಜೆಪಿ ಎಂದಿನಂತೇ ತನ್ನ ಷಡ್ಯಂತ್ರ ರೂಪಿಸುತ್ತಿದೆ, ನಾನು ಹೇಳಿದ್ದನ್ನು ಬೇರೆ ರೀರತಿ ಅರ್ಥೈಸಲಾಗಿದೆ ಎಂದು ಕುಮಾರಸ್ವಾಮಿ ನಮತರ ಸಮಜಾಯಿಷಿ ನೀಡಿದ್ದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ, ನಿಮಗೆ ಅರ್ಥವಾಗಲೆಂದೇ ಕನ್ನಡದಲ್ಲಿ ನೀವೇ ಮಾತನಾಡಿದ ವಿಡೀಯೋ ಹಾಕಿದ್ದೇವೆ, ಕನ್ನಡ ಅರ್ಥವಾಗದಿದ್ದರೆ ಕನ್ನಡ ಮೇಷ್ಟು ಸಿದ್ಧರಾಮಯ್ಯ ಅವರನ್ನು ಕೇಳಿ ಎಂದು ಬಿಜೆಪಿ ಪ್ರತಿಕ್ರಿಯೆ ನೀಡಿದೆ.

ಗಡಿ ಕಾಯೋರು, ಶ್ರೀಮಂತರ ಮಕ್ಕಳಲ್ಲ. ಬಡವರ ಮಕ್ಕಳು, ಎರಡ್ಹೊತ್ತಿನ ಊಟಕ್ಕೆ ಗತಿ ಇಲ್ಲದೆ, ಕೆಲಸ ಇಲ್ಲದೆ ಕೊನೆಗೆ ಸೇನೆ ಸೇರಿರೋರು, ಅಂಥವರ ಬಾಳಿನ ಜೊತೆ ಪ್ರಧಾನಿ ನರೇಂದ್ರ ಮೋದಿ ಅವರು ಚೆಲ್ಲಾಟವಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಮದ್ದೂರಿನಲ್ಲಿ ಹೇಳಿದ್ದರು.

ಕುಮಾರಸ್ವಾಮಿ ಅವರೇ, ದೇಶದ ಬಗ್ಗೆ ಭಕ್ತಿ ಇರುವವರು, ರಾಷ್ಟ್ರಪ್ರೇಮ ಇರುವವರು ಸೇನೆ ಸೇರುತ್ತಾರೆ. ಅಷ್ಟಿದ್ದರೆ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕಿಣತ ನಿಮ್ಮ ಮಗನಿಗೆ ಸೇನೆಗೆ ಸೇರಲು ಹೇಳಿ. ಯೋಧರಾಗಲು ಏನು ಬೇಕು ಎಂಬುದು ನಿಮಗೆ ಆಗ ತಿಳಿಯಬಹುದು ಎಂದು ಬಿಜೆಪಿ ಟ್ವೀಟ್ ಮಾಡಿ ಅವರೇ ಮಾತನಾಡಿದ ವಿಡಿಯೋವನ್ನೂ ಟ್ವೀಟ್ ಮಾಡಿತ್ತು.

ಬಿಜೆಪಿ ಮತ್ತೆ ತನ್ನ ಹಳೆಯ ತಂತ್ರ ಮಾಡುತ್ತಿದೆ. ಅವರು ಮತ್ತೊಂದು ಎಡಿಟೆಡ್ ವಿಡಿಯೋ ಹಾಕಿ ನನಗೆ ಅವಮಾನ ಮಾಡಲು ಪ್ರಯತ್ನಿಸುತ್ತಿದೆ. ಸೇನೆಗೆ ಸೇರುವವರೆಲ್ಲರೂ ಶ್ರೀಮಂತರಾಗಿರುವುದಿಲ್ಲ ಎಂದು ನಾನು ಹೇಳಿದ್ದೆ. ಮತಕ್ಕಾಗಿ ಅಂಥವರ ಬಾಲಿನ ಜೊತೆ ಪ್ರಧಾನಿ ಆಟವಾಡುತ್ತಿದ್ದಾರೆ ಎಂದಿದ್ದೆ. ಕೇವಲ ಜೀವನೋಪಾಯಕ್ಕಾಗಿ ಯೋಧರು ಸೇನೆಯಲ್ಲಿರುತ್ತಾರೆ ಎಂದು ನಾನು ಎಲ್ಲಿಯೂ ಹೇಳಿಲ್ಲ ಎಂದು ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ಸಮಜಾಯಿಷಿ ನೀಡಿದ್ದರು.

ಎಚ್ ಡಿ ಕುಮಾರಸ್ವಾಮಿ ಅವರು ತಾವು ಸಿಕ್ಕಿಹಾಕಿಕೊಂಡರೆ, ಅದನ್ನು ಎಡಿಟೆಡ್ ವಿಡಿಯೋ ಎಂದು ಹೇಳಿ ಅಳುವುದು ಹೊಸತಲ್ಲ. ನಿಮಗೆ ಅರ್ಥವಾಗಲೆಂದೇ ನೀವೇ ಕನ್ನಡದಲ್ಲಿ ಮಾತನಾಡಿದ ವಿಡಿಯೋವನ್ನು ಹಾಕಿದ್ದೇವೆ. ನಿಮಗೆ ಕನ್ನಡ ಅರ್ಥವಾಗದಿದ್ದರೆ ಕನ್ನಡದ ಮೇಷ್ಟ್ರು ಸಿದ್ದರಾಮಯ್ಯ ಅವರನ್ನು ಕೇಳಿ ತಿಳಿದುಕೊಳ್ಳಿ. ಇದರಲ್ಲಾದರೂ ನೀವು ಮತ್ತು ಅವರು ‘ಸಮನ್ವಯ’ ಸಾಧಿಸುವಂತಾಗಲಿ ಎಂದು ಬಿಜೆಪಿ ಅದಕ್ಕೆ ಉತ್ತರ ನೀಡಿದೆ. (ಎನ್.ಬಿ)

Leave a Reply

comments

Related Articles

error: