ಕರ್ನಾಟಕಮನರಂಜನೆ

‘ನಿಖಿಲ್ ಎಲ್ಲಿದಿಯಪ್ಪ’ ಚಿತ್ರದಲ್ಲಿ ನಟಿಸುತ್ತೇನೆ: ತಾರಾ ಅನುರಾಧ

ಬೆಳಗಾವಿ (ಏ.12): ಸಿಎಂ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಮಂಡ್ಯ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದು, ಇದಾದ ಬಳಿಕ ನಿಖಿಲ್ ಎಲ್ಲಿದಿಯಪ್ಪಾ ಡೈಲಾಗ್ ಫುಲ್ ವೈರಲ್ ಆಗಿತ್ತು.

ಇದೀಗ ಈ ರೀತಿಯ ಸಿನಿಮಾ ವಿಚಾರ ಚರ್ಚೆಯಾಗುತ್ತಿದ್ದು, ಬಿಜೆಪಿ ನಾಯಕಿ ತಾರಾ ಅನುರಾಧ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಾವಿಯಲ್ಲಿ ಮಾತನಾಡಿದ ಬಿಜೆಪಿ ಸ್ಟಾರ್ ಪ್ರಚಾರಕಿ, ನಟಿ ತಾರಾ ಅನುರಾಧಾ ಈ ಸಿನಿಮಾ ಮಾಡಿದರೆ ಖಂಡಿತವಾಗಿಯೂ ನಟಿಸುವುದಾಗಿ ಹೇಳಿದ್ದಾರೆ.

ಸಿನಿಮಾ ಕಥೆ ಉತ್ತಮವಾಗಿದ್ದರೆ, ಒಳ್ಳೆಯ ನಿರ್ಮಾಣ ಮಾಡಿದರೆ ನಟಿಸುತ್ತೇವೆ. ಅದರ ಬಗೆಗಿನ ಟ್ರೋಲ್ ಆದ ವಿಡಿಯೋಗಳನ್ನು ನೋಡಿದ್ದೇನೆ. ಯಾರನ್ನೂ ಕೂಡ ತೇಜೋವಧೆ ಮಾಡುವಂತಹ ಸಿನಿಮಾ ಇರಬಾರದು. ಒಳ್ಳೆಯ ಕಥೆ, ಸಂಭಾವನೆ ಇದ್ದರೆ ನಟನೆ ಮಾಡುವುದಾಗಿ ತಾರಾ ಅನುರಾಧಾ ಹೇಳಿದರು. (ಎನ್.ಬಿ)

Leave a Reply

comments

Related Articles

error: