ಮೈಸೂರು

ಅಕ್ರಮವಾಗಿ ಮರಳು ಸಾಗಿಸುತ್ತಿದ್ದ  ಇಬ್ಬರು ವ್ಯಕ್ತಿಗಳಿಗೆ  ನಾಲ್ಕು ವರ್ಷ ಜೈಲು ಶಿಕ್ಷೆ

ಮೈಸೂರು,ಏ.13:- ಅಕ್ರಮವಾಗಿ ಮರಳು ಸಾಗಿಸುತ್ತಿದ್ದ  ಇಬ್ಬರು ವ್ಯಕ್ತಿಗಳಿಗೆ   2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ 50ಸಾವಿರ ರೂ.ದಂಡವನ್ನು ವಿಧಿಸಿದೆ.

ರಮೇಶ್ ಮತ್ತು ಶಿವಕುಮಾರ್ ಎಂಬವರೇ ಶಿಕ್ಷೆಗೊಳಗಾದವರಾಗಿದ್ದು, ಇವರು ಹುಣಸೂರಿನ ಬಿಳಿಕೆರೆ ಸಮೀಪದ ದೊಡ್ಡಕೊಪ್ಪಲು ಮತ್ತು ತೆಂಕನಕೊಪ್ಪಲು ಮಧ್ಯೆ 2016ರ ಫೆಬ್ರವರಿ 7ರ ರಾತ್ರಿ ಟಿಪ್ಪರ್ ನಲ್ಲಿ ಮರಳನ್ನು ಸಾಗಿಸುತ್ತಿದ್ದ ವೇಳೆ ಪೊಲೀಸರು ಬಂಧಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ವಿಜಯ್ ಕುಮಾರ್ ಎಂ ಆನಂದಶೆಟ್ಟಿ ಅವರು ಇಬ್ಬರಿಗೆ ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದರೆ, ಟಿಪ್ಪರ್ ಚಾಲಕ ಗೋಪಾಲ್ ಎಂಬಾತನಿಗೆ 3ತಿಂಗಳು ಶಿಕ್ಷೆ ವಿಧಿಸಿದರು. ಸರ್ಕಾರದ ಪರವಾಗಿ ಹೆಚ್.ಡಿ.ಆನಂದ್ ಕುಮಾರ್ ವಾದ ಮಂಡಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: