
ಕರ್ನಾಟಕಪ್ರಮುಖ ಸುದ್ದಿ
ರಾಮಮಂದಿರದ ಇಟ್ಟಿಗೆಯಲ್ಲಿ ಬಿಜೆಪಿಯವರು ಮನೆ ಕಟ್ಕೊಂಡಿದ್ದಾರೆ: ಹೆಚ್.ಡಿ. ರೇವಣ್ಣ ಆರೋಪ
ಹಾಸನ (ಏ.13): ರಾಮಮಂದಿರ ಕಟ್ಟುತ್ತೇವೆಂದು ಸಂಗ್ರಹಿಸಿದ್ದ ಇಟ್ಟಿಗೆಗಳನ್ನೆಲ್ಲ ಬಳಸಿಕೊಂಡು ಯಡಿಯೂರಪ್ಪ ಅವರು ಜಗದೀಶ್ ಶೆಟ್ಟರ್, ಈಶ್ವರಪ್ಪ ಮನೆ ಕಟ್ಟಿಸಿಕೊಂಡಿದ್ದಾರೆ ಎಂದು ಸಚಿವ ಹೆಚ್.ಡಿ. ರೇವಣ್ಣ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಹೆಚ್.ಡಿ. ರೇವಣ್ಣ ಅವರು, ಕಳೆದ ಐದು ವರ್ಷಗಳಿಂದ ಮೋದಿ ಆಳ್ವಿಕೆಯಲ್ಲಿದ್ದಾರೆ. ಆದರೆ, ಹುತಾತ್ಮ ಸೈನಿಕರ ಕುಟುಂಬಕ್ಕೆ ಸೌಲಭ್ಯ ನೀಡುತ್ತಿಲ್ಲ. ರಾಜ್ಯ ಸರ್ಕಾರದಿಂದ 48 ಗಂಟೆಯಲ್ಲಿ ಹುತಾತ್ಮ ಸೈನಿಕರ ಕುಟುಂಬಕ್ಕೆ ಕೆಲಸ ಮತ್ತು ಸೌಕರ್ಯ ನೀಡಲು ಕ್ಯಾಬಿನೆಟ್ನಲ್ಲಿ ತಿಳಿಸುತ್ತೇನೆ. ಮೋದಿ ಸರ್ಕಾರದ ಬದಲು ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಕಾರ್ಯವನ್ನು ಅನುಷ್ಠಾನಕ್ಕೆ ತರುತ್ತೇವೆ ಎಂದು ರೇವಣ್ಣ ಹೇಳಿದ್ದಾರೆ.
20 ಪರ್ಸೆಂಟ್ ಸರ್ಕಾರ ಯಡಿಯೂರಪ್ಪನವರದ್ದೇ ಹೊರತು ನಮ್ಮದಲ್ಲ. ಈಶ್ವರಪ್ಪ, ಜಗದೀಶ್ ಶೆಟ್ಟರ್ ಕಮಿಷನ್ ವ್ಯವಹಾರ, ಪರ್ಸಂಟೇಜ್ ಏನೇ ಇದ್ದರೂ ಅವರನ್ನೇ ಕೇಳಬೇಕು. ಅವರ ಬಳಿಯೇ ಅಲ್ವಾ ದುಡ್ಡು ಎಣಿಸುವ ಯಂತ್ರ ಸಿಕ್ಕಿದ್ದು ಎಂದು ಪ್ರಶ್ನಿಸಿದರು. (ಎನ್.ಬಿ)