ದೇಶ

ದೆಹಲಿಯಲ್ಲಿ ಡೆಂಘಿ: ಎರಡು ತಿಂಗಳಿಂದ ಏನು ಮಾಡುತ್ತಿದ್ರಿ – ಹಸಿರು ನ್ಯಾಯಾಧಿಕರಣ ಪ್ರಶ್ನೆ?

ನವದೆಹಲಿ: ದೆಹಲಿ ಪ್ರತಿಯೊಬ್ಬರೂ ಕಾಯಿಲೆಯಿಂದ ನರಳುತ್ತಿದ್ದಾರೆ. ಇಷ್ಟು ತಿಂಗಳು ನೀವೇನು ಮಾಡುತ್ತಿದ್ರಿ? ಎಂದು ಎನ್ಡಿಎಂಸಿ ಮತ್ತು ಇತರ ಪುರಸಭೆ ಸಂಸ್ಥೆಗಳ ಅಧಿಕಾರಿಗಳ ಮೇಲೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಹರಿಹಾಯ್ದಿದೆ.

ದೇಶದ ರಾಜಧಾನಿಯಲ್ಲಿ ಚಿಕೂನ್ ಗುನ್ಯ ಮತ್ತು ಡೆಂಘೀ ತಾಂಡವವಾಡುತ್ತಿರುವ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ಅಧಿಕಾರಿಗಳು, ವಾಸ್ತವಾಂಶ ತುಂಬಾ ಗಂಭೀರವಾಗಿದೆ. ನೀವೆ ಸಿದ್ಧಪಡಿಸಿದ ವರದಿಯನ್ನು ತೋರಿಸುವ ಅಗತ್ಯವಿಲ್ಲ ಎಂದು ಪುರಸಭೆ ಅಧಿಕಾರಿಗಳ ವಿರುದ್ಧ ಗುಡುಗಿದ್ದಾರೆ. ಅಲ್ಲದೇ, ಪ್ರಧಾನ ಸಮಿತಿಯೊಂದನ್ನು ರಚಿಸಿ ಜಿಲ್ಲಾ ಹಂತದಿಂದಲೇ ಸಮಸ್ಯೆಯನ್ನು ಬಗೆಹರಿಸುವಂತೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದೆ. ಜಿಲ್ಲಾ ಸಮಿತಿಯು ಪ್ರತಿ 15 ದಿನಕ್ಕೊಂದು ಬಾರಿ ಈ ವರದಿ ನೀಡುವಂತೆ ಕೋರ್ಟ್ ಕೂಡ ಸೂಚಿಸಿದೆ. ಡೆಂಘೀ ಮತ್ತು ಚಿಕೂನ್ ಗುನ್ಯಾದಿಂದ ಈವರೆಗೆ ಸುಮಾರು 19 ಮಂದಿ ಮೃತಪಟ್ಟಿದ್ದು, 1,500ಕ್ಕೂ ಹೆಚ್ಚು ಮಂದಿ ಕಾಯಿಲೆಯಿಂದ ನರಳುತ್ತಿದ್ದಾರೆ.

ದೆಹಲಿಯಲ್ಲಿ ಜನ ಜ್ವರದಿಂದ ನರಳುತ್ತಿದ್ದ ಸಂದರ್ಭ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಫಿನ್ಲೆಂಡ್‍ ಪ್ರವಾಸಕ್ಕೆ ತೆರಳಿದ್ದು ಬಹು ಟೀಕೆಗೆ ಕಾರಣವಾಗಿತ್ತು. ಈ ಮಧ್ಯೆ ಪ್ರವಾಸದಿಂದ ಆಗಮಿಸಿದ ಸಿಸೋಡಿಯಾ ಮೇಲೆ ಇಂಕ್ ಎರಚಾಟ ಕೂಡ ನಡೆದಿತ್ತು.

Leave a Reply

comments

Related Articles

error: