ಮೈಸೂರು

ಫೆ.3-5 : ಲಯವಾದ್ಯ, ನೃತ್ಯ ಕಾರ್ಯಕ್ರಮ

ಮೈಸೂರಿನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಲಯ ವಿದ್ಯಾ ಪ್ರತಿಷ್ಠಾನ ವತಿಯಿಂದ ಫೆಬ್ರವರಿ 3, 4 ಮತ್ತು 5ರಂದು ವಿಶೇಷ ಸಂಗೀತ, ಲಯವಾದ್ಯ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

`ಲಯಲಹರಿ’ ಕಾರ್ಯಕ್ರಮವು ಹೆಚ್.ಎಲ್. ಶಿವಶಂಕರಸ್ವಾಮಿಯವರಿಂದ ನಿರ್ದೇಶಿಸಲ್ಪಡುತ್ತಿರುವ ವಿಶೇಷ ತಾಳವಾದ್ಯ ಸಂಗೀತ ಮೇಳ ಕಾರ್ಯಕ್ರಮವಾಗಿದ್ದು ರಾಜ್ಯ ಹಾಗೂ ರಾಷ್ಟ್ರದೆಲ್ಲೆಡೆ ಜನ ಮೆಚ್ಚುಗೆಗೆ ಪಾತ್ರವಾಗಿದೆ. ಪ್ರತಿಷ್ಠಾನವು ಪ್ರತಿ ತಿಂಗಳು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು, ಇದರಲ್ಲಿ ಯುವ ಮತ್ತು ಉದಯೋನ್ಮುಖ ಪ್ರತಿಭೆಗಳಿಗೂ ಅವಕಾಶವನ್ನು ಕಲ್ಪಿಸಲಾಗುತ್ತಿದೆ. ಅನೇಕ ಪರಿಣತ ಮತ್ತು ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮಗಳನ್ನು ಹಾಗೂ ಕಾರ್ಯಾಗಾರವನ್ನು ಸಹ ನಡೆಸಿಕೊಡುತ್ತಿದೆ ಹಾಗೂ ಆರ್ಥಿಕ ನೆರವಿನ ಅವಶ್ಯಕತೆ ಇರುವ ಕಲಾವಿದರಿಗೆ ನೆರವನ್ನೂ ನೀಡುತ್ತಾ ಬಂದಿದೆ.

 

Leave a Reply

comments

Related Articles

error: