ಕ್ರೀಡೆ

ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌: ಸೆಮಿಫೈನಲ್ ಪ್ರವೇಶಿಸಿದ ಸಿಂಧು

ಸಿಂಗಾಪುರ,ಏ.13-ಸಿಂಗಾಪುರ ಓಪನ್ಬ್ಯಾಡ್ಮಿಂಟನ್ಟೂರ್ನಿಯಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ.ಸಿಂಧು ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಸಿಂಧು ಸೆಮಿಫೈನಲ್ ಪ್ರವೇಶಿಸಿದರೆ ಸೈನಾ ನೆಹ್ವಾಲ್ಕಿದಂಬಿ ಶ್ರೀಕಾಂತ್‌, ಸಮೀರ್ವರ್ಮಾ, ಪ್ರಣವ್ಚೋಪ್ರಾಸಿಕ್ಕಿ ರೆಡ್ಡಿ ಹೀನಾಯ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದ್ದಾರೆ.

ಮಹಿಳಾ ಸಿಂಗಲ್ಸ್ಕ್ವಾರ್ಟರ್ಫೈನಲ್ನಲ್ಲಿ ಸಿಂಧು, ವಿಶ್ವ ನಂ.18 ಹಾಗೂ 2017 ವಿಶ್ವ ಕಿರಿಯರ ಚಾಂಪಿಯನ್ಶಿಪ್ ಕಂಚು ವಿಜೇತೆ ಚೀನಾದ ಕಾಯ್ಯಾನ್ಯಾನ್ವಿರುದ್ಧ 21-13, 17-21, 21-14 ಗೇಮ್ಗಳಲ್ಲಿ ಪ್ರಯಾಸದ ಗೆಲುವು ಸಾಧಿಸಿದರು.

ಸೆಮೀಸ್ನಲ್ಲಿ ಸಿಂಧುಗೆ ಮಾಜಿ ವಿಶ್ವ ಚಾಂಪಿಯನ್ಜಪಾನ್ ನಜೊಮಿ ಒಕುಹಾರ ವಿರುದ್ಧ ಸೆಣಸಲಿದ್ದಾರೆ. ಸಿಂಧುಗಿದು 2ನೇ ಸೆಮೀಸ್ಆಗಿದೆ. ಕಳೆದ ತಿಂಗಳು ಇಂಡಿಯಾ ಓಪನ್ನಲ್ಲಿ ಅವರು ಅಂತಿಮ 4 ಹಂತಕ್ಕೇರಿದ್ದರು.

2ನೇ ಶ್ರೇಯಾಂಕಿತೆ ಒಕುಹಾರ ತಮ್ಮ ಕ್ವಾರ್ಟರ್ಫೈನಲ್ಪಂದ್ಯದಲ್ಲಿ ಭಾರತದ ತಾರಾ ಶಟ್ಲರ್ಸೈನಾ ನೆಹ್ವಾಲ್ವಿರುದ್ಧ ನಿರಾಯಾಸವಾಗಿ ಗೆಲುವು ಸಾಧಿಸಿದರು. 21-8, 21-13 ಗೇಮ್ಗಳಲ್ಲಿ ಜಯಿಸಿ, ಸಿಂಧುಸೈನಾ ನಡುವೆ ಸೆಮೀಸ್ಪೈಪೋಟಿ ಏರ್ಪಡುವುದನ್ನು ತಪ್ಪಿಸಿದರು. ಪಂದ್ಯದುದ್ದಕ್ಕೂ ಪ್ರಾಬಲ್ಯ ಮೆರೆದ ಒಕುಹಾರ, ಸೈನಾಗೆ ಪುಟಿದೇಳಲು ಅವಕಾಶವನ್ನೇ ನೀಡಲಿಲ್ಲ.

ಪುರುಷರ ಸಿಂಗಲ್ಸ್ಕ್ವಾರ್ಟರ್ನಲ್ಲಿ ಭಾರತದ ಅಗ್ರ ಆಟಗಾರ ಕಿದಂಬಿ ಶ್ರೀಕಾಂತ್‌, ವಿಶ್ವ ನಂ.1 ಜಪಾನ್ ಕೆಂಟೊ ಮೊಮೊಟಾ ವಿರುದ್ಧ 18-21, 21-19, 9-21 ಗೇಮ್ಗಳಲ್ಲಿ ಸೋಲುಂಡರು. ಮೊಮೊಟಾ ವಿರುದ್ಧ ಶ್ರೀಕಾಂತ್ಗಿದು ಸತತ 9ನೇ ಸೋಲು. ವಿಶ್ವ ನಂ.16 ಸಮೀರ್ವರ್ಮಾ, ಚೈನೀಸ್ತೈಪೆಯ ಚೌ ಟಿಯಾನ್ಚೆನ್ವಿರುದ್ಧ 10-21, 21-15, 15-21 ಗೇಮ್ಗಳಲ್ಲಿ ಪರಾಭವಗೊಂಡು ಹೊರಬಿದ್ದರು.

ಮಿಶ್ರ ಡಬಲ್ಸ್ ಅಂತಿಮ 8 ಸುತ್ತಿನ ಪಂದ್ಯದಲ್ಲಿ ಪ್ರಣವ್ಹಾಗೂ ಸಿಕ್ಕಿ, 3ನೇ ಶ್ರೇಯಾಂಕಿತ ಜೋಡಿಯಾದ ಥಾಯ್ಲೆಂಡ್ ಡೆಚಪೊಲ್ಹಾಗೂ ಸಪ್ಸಿರೆ ವಿರುದ್ಧ 14-21, 16-21 ನೇರ ಗೇಮ್ಗಳಲ್ಲಿ ಸೋತು ನಿರಾಸೆ ಅನುಭವಿಸಿತು. (ಎಂ.ಎನ್)

Leave a Reply

comments

Related Articles

error: