ಕರ್ನಾಟಕಕ್ರೀಡೆ

ಆರ್ ಸಿಬಿ ಆಟಗಾರರ ಬಗ್ಗೆ ಪ್ರೀತಿ ಇರಲಿ: ಯೋಗರಾಜ್ ಭಟ್

ಬೆಂಗಳೂರು,ಏ.13-ಪ್ರತಿ ಬಾರಿ ಐಪಿಎಲ್ ಟೂರ್ನಿ ಆರಂಭವಾದಾಗ ಈ ಸಲ ಕಪ್ ನಮ್ದೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸಪೋರ್ಟ್ ಮಾಡುತ್ತಿರುವ ಅಭಿಮಾನಿಗಳಿಗೆ ಒಂದು ಪಂದ್ಯವನ್ನು ಗೆಲ್ಲದೇ ಆರ್ ಸಿಬಿ ತಂಡ ನಿರಾಸೆ ಮೂಡಿಸಿದೆ. ಇದು ಅಭಿಮಾನಿಗಳ ಆಕ್ರೋಶಕ್ಕೆ ಗುರಿಯಾಗಿದೆ.

ಆರ್ ಸಿ ಬಿ ಆಟಗಾರರ ಪರ ಮಾತನಾಡಿರುವ ನಿರ್ದೇಶಕ ಯೋಗರಾಜ್ ಭಟ್, ಆಟಗಾರ ಬಗ್ಗೆ ಸ್ವಲ್ಪ ಪ್ರೀತಿ ಇರಲಿ ಎಂದಿದ್ದಾರೆ.

ಆರ್ ಸಿ ಬಿ ತಂಡ ಇದುವರೆಗೆ ಒಂದು ಪಂದ್ಯವನ್ನು ಗೆದ್ದಿಲ್ಲ. ಎಂಬುದು ಎಲ್ಲರಿಗೆ ತಿಳಿದಿದೆ. ನಿಜವಾಗಿಯೂ ಇದು ಬೇಸರದ ವಿಷಯ ಹೌದು. ಆದರೆ, ಆ ಬೇಸರದಲ್ಲಿ ಆರ್ ಸಿಬಿ ಗೆ ಎಲ್ಲರೂ ಶಾಪ ಹಾಕುವುದನ್ನು, ಬೈಯುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

ಸೋಲು.. ಗೆಲುವು.. ಎನ್ನುವುದು ಇದ್ದದ್ದೆ. ಗೆದ್ದ ತಕ್ಷಣ ಒಂದು ತಂಡವನ್ನು ಕೊಂಡಾಡುವುದು, ಸೋತ ತಕ್ಷಣ ಬೈಯುವುದು ಇದ್ದದ್ದೆ. ಅದು ಎಲ್ಲರೂ ಮಾಡುವ ಕೆಲಸ. ನಾವು, ನೀವು ಎಲ್ಲರೂ ಅದನ್ನೇ ಮಾಡುತ್ತೇವೆ. ಆದರೆ, ಸತತವಾಗಿ ಸೋತವರಿಗೆ ಮುಖಕ್ಕೆ ಗುರಿ ಇಟ್ಟು, ಕ್ಯಾಕರಿಸಿ ಉಗಿದರೆ, ಅವರು ಮೂರ್ನಾಲ್ಕು ವರ್ಷ ಎದ್ದೇಳುವುದಿಲ್ಲ. ಹೀಗೆ ನಾವು ಬೈಯುತ್ತಿದ್ದರೆ ಅವರ ಚೈತನ್ಯ ಕಳೆದುಹೋಗುತ್ತದೆ. ಸದ್ಯದಲ್ಲಿಯೇ ವಲ್ಡ್ ಕಪ್ ಕೂಡ ಇದೆ. ಅದರಲ್ಲಿ ಸುಮಾರು ಜನ ಆರ್ ಸಿಬಿ ಆಟಗಾರರು ಇದ್ದಾರೆ. ನಾವು ಇದೇ ರೀತಿ ಬೈಯುತ್ತಿದ್ದರೆ ಅವರು ವಲ್ಡ್ ಕಪ್ ನಲ್ಲಿ ಬ್ಯಾಟ್ ಹಿಡಿದಾಗಲೂ ಇದೇ ನೆನಪಾಗುತ್ತದೆ ಎಂದು ಹೇಳಿದ್ದಾರೆ.

ಆಟ ಆಡುವವರಿಗೆ ಯಾವ ರೀತಿ ಸ್ಪೋರ್ಟಿವ್ ನೆಸ್ ಇರುತ್ತದೆಯೋ ನೋಡುವವನಿಗೂ ಅದೇ ರೀತಿಯ ಸ್ಪೋರ್ಟಿವ್ ನೆಸ್ ಇರಬೇಕು. ಆಟಗಾರರ ಕಷ್ಟ ನೋಡುವವರಿಗೆ ಖಂಡಿತ ಗೊತ್ತಾಗುವುದಿಲ್ಲ. ಬೈಯಬೇಡಿ ಆರಾಮಾಗಿ ಇರೀ. ಆಟಗಾರ ಮೇಲೆ, ಆಟದ ಮೇಲೆ ಸ್ವಲ್ಪ ಪ್ರೀತಿ ಇರಲಿ. ಎಲ್ಲ ಸರಿ ಹೋಗುತ್ತದೆ ಎಂದಿದ್ದಾರೆ. (ಎಂ.ಎನ್)

 

Leave a Reply

comments

Related Articles

error: