ಪ್ರಮುಖ ಸುದ್ದಿಮೈಸೂರು

ಮುನಿಸು ಪಕ್ಕಕ್ಕಿಟ್ಟು ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿದ ಸಚಿವ ಜಿ.ಟಿ.ದೇವೇಗೌಡ-ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಏ.15:- ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ನಾಯಕರು ಪಣ ತೊಟ್ಟಿದ್ದು, ಮೈಸೂರಿನಲ್ಲಿ ಮುನಿಸು ಪಕ್ಕಕ್ಕಿಟ್ಟು ಸಚಿವ ಜಿ.ಟಿ.ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ ಅತ್ಯಂತ ಆತ್ಮೀಯವಾಗಿ ಮಾತುಕತೆ ನಡೆಸಿರುವುದು ಕಂಡು ಬಂತು.

ನಿನ್ನೆ ಮೈಸೂರಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಮುನಿಸನ್ನು ಪಕ್ಕಕ್ಕಿಟ್ಟು ಮೈತ್ರಿ ಅಭ್ಯರ್ಥಿ ವಿಜಯ್ ಶಂಕರ್ ಗೆಲುವಿಗಾಗಿ ಶ್ರಮಿಸುತ್ತಿರುವುದು ಕಂಡು ಬಂತು.  ಈ ಸಂದರ್ಭ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ 1983 ರಿಂದ -2006ರವರೆಗೆ ನಾನು-ಸಿದ್ದರಾಮಯ್ಯ ಜೊತೆ ಇದ್ವಿ. ಅದಾದ ಮೇಲೆ ಬೇರೆಯಾಗಿದ್ವಿ.ಇಬ್ಬರು ಒಟ್ಟಾಗಲ್ಲ ಎಂಬ ಆತಂಕ ಇತ್ತು. ಬೆಂಗಳೂರಿನಲ್ಲಿ ನಾವಿಬ್ಬರು ಒಂದೂವರೆ ಗಂಟೆ ಮಾತನಾಡಿದ್ವಿ. ಆ ಮೂಲಕ ಆತಂಕ ದೂರ ಮಾಡಿದ್ವಿ. ಈಗ ಮೈತ್ರಿ ಅಭ್ಯರ್ಥಿಯನ್ನು ಗೆಲಿಸಲು‌ ಒಟ್ಟಾಗಿ ಶ್ರಮಿಸುತ್ತಿದ್ದೇವೆ ಎಂದರು.

ಇದೇ ವೇಳೆ ರಾಹುಲ್ ಗಾಂಧಿ ಹೆಸರನ್ನು ರಾಜೀವ್ ಗಾಂಧಿ ಎಂದು ಬಳಸಿದ್ದು ಕಂಡು ಬಂತು. ಕೆಲವರು ನಾವು ಒಂದಾಗಿ ಬರುವುದನ್ನು ಪ್ರಶ್ನೆ‌ಮಾಡಿದ್ದರು. ನೀವು ಹೇಗೆ ಒಂದಾಗಿ ಬರುತ್ತೀರಿ ಎಂದು ಕೇಳಿದ್ದರು. ಅಂತವರಿಗೆ ಮೈತ್ರಿ ಸರ್ಕಾರದಲ್ಲಿ ನಮಗೆ ಸಿಕ್ಕಿರುವ ಅಧಿಕಾರದ ಬಗ್ಗೆ ತಿಳಿಸಿದ್ದೇನೆ ಎಂದರು.

ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತದಾನದ ದಿನ ಮರೆರು 19 ನೇ ತಾರೀಖು ಮತದಾನ ನಡೀತಿದೆ ಎಂದರು. ಬಳಿಕ ತಕ್ಷಣ ಎಚ್ಚೆತ್ತು 18ನೇ ತಾರೀಖು ಎಂದರು.  ಚಾಮುಂಡೇಶ್ವರಿಯಲ್ಲಿ ಸೋಲನ್ನು ನೆನಪಿಸಿಕೊಂಡ ಸಿದ್ದರಾಮಯ್ಯ ನಾವಿಬ್ಬರು ಸೋತ ನಂತರ ಮಾತನಾಡ್ತ ಇದ್ವಿ. ಆದರೆ ರಾಜಕೀಯವಾಗಿ ದೂರ ದೂರ ಇದ್ವಿ. ನಾವಿಬ್ಬರು 2006 ರವರೆಗೆ ಜೊತೆಗೆ ಇದ್ವಿ ಅಲ್ವಾ ಎಂದು ಜಿ.ಟಿ.ದೇವೇಗೌಡರನ್ನು ಮಾಜಿ ಸಿಎಂ  ಸಿದ್ದರಾಮಯ್ಯ ಕೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: