ಕರ್ನಾಟಕಸುದ್ದಿ ಸಂಕ್ಷಿಪ್ತ

ಹಾಸನ ಹೊಸ ಬಸ್ ನಿಲ್ದಾಣದಲ್ಲಿ ಮತದಾರರ ಜಾಗೃತಿ ಛಾಯಾಚಿತ್ರ ಪ್ರದರ್ಶನ

ಹಾಸನ (ಏ.15): ಲೋಕಸಭಾ ಚುನಾವಣೆ-2019 ಕ್ಕೆ ಸಂಬಂಧಿಸಿದಂತೆ ರಾಜ್ಯ ಚುನಾವಣಾ ಯೋಗದ ನಿರ್ದೇಶನದಂತೆ ಮತದಾನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯದ 30 ಜಿಲ್ಲಾ ಕೇಂದ್ರಗಳಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.

ಹಾಸನ ಜಿಲ್ಲೆಯ ಹೊಸ ಬಸ್ ನಿಲ್ದಾಣದ ಆವರಣದಲ್ಲಿ ಏ. 14 ರಿಂದ 16 ರವರೆಗೆ ಮೂರು ದಿನಗಳ ಕಾಲ ಈ ವಿಶೇಷ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ.ಪ್ರತಿ ಮತವು ಎಷ್ಟು ಅಮೂಲ್ಯ ಎಂಬುದರ ಜೊತೆಗೆ ಯುವ ಸಮೂಹ, ಹಿರಿಯರು, ವೃದ್ಧರು, ಮಹಿಳೆಯರು, ವಿಶೇಷ ಚೇತನರು ಒಳಗೊಂಡಂತೆ ಎಲ್ಲಾ ವರ್ಗಗಳಿಗೂ ಆತ್ಮವಿಶ್ವಾಸ ತುಂಬುವ ಸಂದೇಶಗಳು ಹಾಗೂ ಚುನಾವಣಾ ಅಕ್ರಮಗಳ ತಡೆಗೆ ಸಾರ್ವಜನಿಕರ ಸಹಭಾಗಿತ್ವದ ಮಹತ್ವ ಸಾರುವ ಹಲವು ಸಂದೇಶಗಳು ಸುಗಮ ಹಾಗೂ ನೈತಿಕ ಮತದಾನಕ್ಕೆ ಸ್ಪೂರ್ತಿ ತುಂಬುವ ಸಂದೇಶಗಳನ್ನು ಸಾರುವ ಫಲಕಗಳನ್ನು ಈ ಪ್ರದರ್ಶನ ಒಳಹೊಂಡಿದೆ.

ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಆಗಮಿಸಿ ಮೂರು ದಿನಗಳ ಮತದಾರ ಜಾಗೃತಿಯ ಛಾಯಾಚಿತ್ರ ಪ್ರದರ್ಶನದ ಸದುಪಯೋಗ ಪಡೆದುಕೊಳ್ಳಬೇಕೆಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಅವರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: