ಮನರಂಜನೆ

ಕೋಮಲ್ ಅಭಿನಯದ ‘ಕೆಂಪೇಗೌಡ-2’ ಚಿತ್ರದ ಟ್ರೇಲರ್ ರಿಲೀಸ್

ಬೆಂಗಳೂರು,ಏ.15-ಬರೋಬ್ಬರಿ ಮೂರು ವರ್ಷಗಳ ಬಳಿಕ ಹಾಸ್ಯ ನಟ ಕೋಮಲ್ ತೆರೆ ಮೇಲೆ ಅಬ್ಬರಿಸಲು ಬರುತ್ತಿದ್ದಾರೆ. ಆದರೆ ಈ ಬಾರಿ ಖಡಕ್ ಪೊಲೀಸ್ ಆಫೀಸರ್ ಆಗಿ ಅಬ್ಬರಿಸಲು ಬರುತ್ತಿದ್ದಾರೆ.

ಕೋಮಲ್ ಅಭಿನಯದ ಕೆಂಪೇಗೌಡ-2′ ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಬಿಡುಗಡೆಯಾದ ಅರ್ಧ ದಿನದಲ್ಲೇ ಬರೋಬ್ಬರಿ 6 ಲಕ್ಷಕ್ಕೂ ಅಧಿಕ ಜನರು ಟ್ರೇಲರ್ ವೀಕ್ಷಿಸಿದ್ದಾರೆ.

ಕೆಂಪೇಗೌಡ ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯಸಿದ್ದರು. ಇದೀಗ, `ಕೆಂಪೇಗೌಡ 2’ ಚಿತ್ರದಲ್ಲಿ ಅಚ್ಚರಿ ಎಂಬಂತೆ ಕೋಮಲ್ ನಾಯಕನಾಗಿ ಅಭಿನಯಿಸಿದ್ದಾರೆ.

ಕೆಂಪೇಗೌಡಚಿತ್ರಕ್ಕೆ ನಿರ್ಮಾಪಕರಾಗಿದ್ದ ಶಂಕರೇಗೌಡ ಅವರು ಕೋಮಲ್ ನಾಯಕತ್ವದಕೆಂಪೇಗೌಡ 2′ ಚಿತ್ರದ ಮೂಲಕ ನಿದೇಶಕರಾಗುತ್ತಿದ್ದಾರೆ. ಚಿತ್ರಕ್ಕಾಗಿ ಕೋಮಲ್ ತಮ್ಮ ದೇಹವನ್ನು ಫೀಟ್ ಮಾಡಿಕೊಳ್ಳಬೇಕಿತ್ತು. ಅಷ್ಟೇ ಅಲ್ಲ, ಕಾಮಿಡಿ ನಟರಾಗಿ ಖ್ಯಾತರಾಗಿದ್ದ ಕೋಮಲ್ ಬಾಡಿ ಲಾಂಗ್ವೇಜ್ ಕೂಡ ಚೇಂಜ್ ಆಗಬೇಕಿತ್ತು. ಅದೆಲ್ಲವನ್ನೂ ಮಾಡಿಕೊಂಡು ಬರೋಬ್ಬರಿ ಮೂರು ವರ್ಷಗಳ ಬಳಿಕಕೆಂಪೇಗೌಡ-2′ ಚಿತ್ರದ ಮೂಲಕ ಮತ್ತೆ ಕಮಾಲ್ ಮಾಡಲು ಕೋಮಲ್ ಹೊರಟಿದ್ದಾರೆ.

ಕೆಂಪೇಗೌಡ-2′ ಚಿತ್ರದ ವಿಶೇಷ ಅಂದ್ರೆ ಕ್ರಿಕೆಟ್ ಆಟಗಾರ ಶ್ರೀಶಾಂತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಕನ್ನಡ ಸಿನಿಮಾಗೆ ಶ್ರೀಶಾಂತ್ ಬಣ್ಣ ಹಚ್ಚಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ವಿಶೇಷ ಪಾತ್ರದಲ್ಲಿ ನಟ ಲೂಸ್ ಮಾದ ಯೋಗಿ ಕೂಡ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಕೆಂಪೇಗೌಡ-2 ರಿಲೀಸ್ ಗೆ ತಯಾರಾಗಿದೆ.

ಚಿತ್ರದ ಬಗ್ಗೆ ಮಾತನಾಡಿರುವ ಕೋಮಲ್, ಇದು ಧರ್ಮಸ್ಥಳಕ್ಕೆ ಬೇರೆ ಬೇರೆ ರೀತಿಯಲ್ಲಿ ಹೋದಂತೆ. ಕೆಲವರು ಹೆಲಿಕಾಪ್ಟರ್ ಮೂಲಕ ಹೋದರೆ ಇನ್ನು ಕೆಲವರು ಕಾರಿನಲ್ಲಿ ಹೋಗುತ್ತಾರೆ. ಮತ್ತೆ ಹಲವರು ಸಾರ್ವಜನಿಕ ಸಾರಿಗೆ ಮೂಲಕ ಪ್ರಯಾಣಿಸುತ್ತಾರೆ. ಆದರೆ, ನಾವು ಪಾದಯಾತ್ರೆ ಮೂಲಕ ಜರ್ನಿ ಮಾಡಿದ್ದೇವೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ಮೊದಲು ನಟ ಕೋಮಲ್ ಕುಮಾರ್ ಅವರಕಥೆ ಚಿತ್ರಕಥೆ ನಿರ್ದೇಶನ ಪಟ್ಟಣ್ಣಚಿತ್ರವು 2016ರಲ್ಲಿ ರಿಲೀಸ್ ಆಗಿತ್ತು. ಬಳಿಕ ಕೋಮಲ್ ಅವರ ನಟನೆಯ ಯಾವುದೇ ಚಿತ್ರವೂ ತೆರೆಗೆ ಬಂದಿಲ್ಲ. ಕೆಂಪೇಗೌಡ ಚಿತ್ರ ಕೂಡ ಶೂಟಿಂಗ್ ಅಥವಾ ಇನ್ನಾವುದೇ ರೀತಿಯಲ್ಲಿ ಸೌಂಡ್ ಮಾಡಿರಲಿಲ್ಲ. ಹೀಗಾಗಿ, ಕೋಮಲ್ ಬಹುಶಃ ಸಿನಿಮಾ ಬಿಟ್ಟು ಬೇರೇನೋ ಮಾಡುತ್ತಿರಬಹುದು ಎಂದೇ ಸಿನಿಪ್ರೇಕ್ಷಕರು ಭಾವಿಸಿದ್ದರು. ಆದರೆ, ಇದೀಗ ಕೋಮಲ್ ಕೆಂಪೇಗೌಡ ಚಿತ್ರ ಮುಗಿಸಿ ಪ್ರೇಕ್ಷಕರೆದುರು ಬರಲು ಸಜ್ಜಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: