ಮೈಸೂರು

ಪಿಯುಸಿ ಫಲಿತಾಂಶ: ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಕಾಲೇಜಿನಲ್ಲಿ ಮೂವರು ಟಾಪರ್

ಮೈಸೂರು,ಏ.15-ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ವಿಜಯನಗರದ 2ನೇ ಹಂತದಲ್ಲಿರುವ ಸದ್ವಿದ್ಯಾ ಸೆಮಿ ರೆಸಿಡೆನ್ಸಿಯಲ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿಗಳು ವಿಜ್ಞಾನ ವಿಭಾಗದಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ಅನನ್ಯ ಕಣಿಗಾಲ್ಪುಲಾ 590 (ಶೇ.98.33), ಎಚ್.ಆರ್.ನಂದನ್ 576 (ಶೇ.96), ಜೆ.ಎ.ಸಾರಿಕಾ 572 (ಶೇ.95.33) ಅಂಕಗಳನ್ನು ಗಳಿಸಿ ಉತ್ತೀರ್ಣರಾಗಿದ್ದಾರೆ.

ಅನನ್ಯ ಕಣಿಗಾಲ್ಪುಲಾ ಸಂಸ್ಕೃತದಲ್ಲಿ 99, ಇಂಗ್ಲಿಷ್ ನಲ್ಲಿ 95, ಭೌತಶಾಸ್ತ್ರದಲ್ಲಿ 98, ರಸಾಯನ ಶಾಸ್ತ್ರದಲ್ಲಿ 99, ಗಣಿತ ಶಾಸ್ತ್ರದಲ್ಲಿ 100, ಜೀವಶಾಸ್ತ್ರದಲ್ಲಿ 99 ಅಂಕ ಗಳಿಸಿದ್ದಾರೆ.

ಎಚ್.ಆರ್.ನಂದನ್ ಕನ್ನಡದಲ್ಲಿ 93, ಇಂಗ್ಲಿಷ್ ನಲ್ಲಿ 92, ಭೌತಶಾಸ್ತ್ರದಲ್ಲಿ 91, ರಸಾಯನ ಶಾಸ್ತ್ರದಲ್ಲಿ 100, ಗಣಿತ ಶಾಸ್ತ್ರದಲ್ಲಿ 100, ಕಂಪ್ಯೂಟರ್ ಸೈನ್ಸ್ ನಲ್ಲಿ 100 ಅಂಕಗಳಿಸಿದ್ದಾರೆ.

ಜೆ.ಎ.ಸಾರಿಕಾ ಹಿಂದಿಯಲ್ಲಿ 95, ಇಂಗ್ಲಿಷ್ ನಲ್ಲಿ 87, ಭೌತಶಾಸ್ತ್ರದಲ್ಲಿ 97, ರಸಾಯನ ಶಾಸ್ತ್ರ 100, ಗಣಿತಶಾಸ್ತ್ರದಲ್ಲಿ 98, ಜೀವಶಾಸ್ತ್ರದಲ್ಲಿ 95 ಅಂಕಗಳನ್ನು ಗಳಿಸಿದ್ದಾರೆ. (ಎಚ್.ಎನ್, ಎಂ.ಎನ್)

Leave a Reply

comments

Related Articles

error: