ಪ್ರಮುಖ ಸುದ್ದಿಮೈಸೂರು

ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲ್ಲ ಎಂದಿದ್ದೆ, ಬೇರೆ ಕಡೆ ಸ್ಪರ್ಧಿಸಲ್ಲ ಎಂದಿದ್ದೀನಾ? ; ಚುನಾವಣೆಗೆ ಸ್ಪರ್ಧಿಸುವ ಸುಳಿವು ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ಏ.15:-  ನಾನು ಕೇವಲ ಚಾಮುಂಡೇಶ್ವರಿಯಲ್ಲಿ ಮಾತ್ರ ಚುನಾವಣೆಯಲ್ಲಿ ನಿಲ್ಲಲ್ಲ ಅಂತ ಹೇಳಿದ್ದೆ. ನಾನು ಬೇರೆ ಕಡೆ ನಿಲ್ಲೋದಿಲ್ಲ ಅಂತ ಹೇಳಿದ್ದೀನಾ ಎಂದು ಕೇಳುವ ಮೂಲಕ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ   ಸುಳಿವನ್ನು ಮಾಜಿ ಸಿಎಂ  ಸಿದ್ದರಾಮಯ್ಯ ನೀಡಿದ್ದಾರೆ.

ಮೈಸೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು ಇನ್ನೂ ಚುನಾವಣೆಗೆ ನಾಲ್ಕು ವರ್ಷ ಬಾಕಿ ಇದೆ, ಮುಂದೆ ನೋಡೋಣ ಬಿಡಿ. ನನಗೂ ಚಾಮುಂಡೇಶ್ಚರಿ ಕ್ಷೇತ್ರದ ಖುಣ ಮುಗಿದಿದೆ ಎಂದರು.  ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಸೋತ್ರೆ, ಸರ್ಕಾರ ಉಳಿಯುತ್ತಾ ಅನ್ನೋ   ಹೇಳಿಕೆ ವಿಚಾರದಿಂದ ಯೂಟರ್ನ್ ತೆಗೆದುಕೊಂಡ ಸಿದ್ದರಾಮಯ್ಯ ನಾನು ಹೇಳಿದ್ದು ಮೈತ್ರಿ ಪಕ್ಷ ಸೋತ್ರೆ, ಸರ್ಕಾರವನ್ನು ಬಿಜೆಪಿ ಅಸ್ಥಿರಗೊಳಿಸಬಹುದು ಅಂತ ಹೇಳಿದ್ದೇನೆ. ಬಿಜೆಪಿ ಸದಾ ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದೆ. ಯಡಿಯೂರಪ್ಪ ಮೊದಲಿಂದಲೂ ಹೇಳಿಕೊಂಡು ಬರುತ್ತಿದ್ದಾನೆ. ಸರ್ಕಾರ ಬೀಳಿಸೋಕೆ ಆಗಿದ್ಯಾ ? ಯಡಿಯೂರಪ್ಪ ಒಬ್ಬ ಲಿಡರೇನ್ರಿ. ಬಿಜೆಪಿ ಒಂದು ಪಾರ್ಟಿನಾ, ಒಂದು ತತ್ವ ಸಿದ್ಧಾಂತ ಇಲ್ಲ, ಅವ್ರಿಗೆ ನೈತಿಕತೆ ಇದ್ಯಾ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಐಟಿ ಕಚೇರಿ ಮುಂದೆ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿ ನನಗೂ ಐಟಿಯಿಂದ ನೋಟಿಸ್ ಬಂದಿದೆ. ಈಗಾಗಲೇ ಉತ್ತರ ಕೊಟ್ಟಿದ್ದೇನೆ. ನಾನು ಚುನಾವಣೆಯಲ್ಲಿ ಬಿಜಿ ಇದ್ದೇನೆ. ನಾನು ಉತ್ತರ ಕೊಡಲು 15 ದಿನ ಬೇಕು ಎಂದು ಉತ್ತರ ಕೊಟ್ಟಿದ್ದೇನೆ ಎಂದರು.

ಪರ್ಸೆಂಟೆಜ್ ಸರ್ಕಾರ ಎಂಬ ಮೋದಿ ಹೇಳಿಕೆಗೆ   ಕೆಂಡಾಮಂಡಲರಾದ ಅವರು  ಒಬ್ಬ ಪ್ರಧಾನಿಯಾಗಿ ಇಂತಹ ಹೇಳಿಕೆಗಳನ್ನು ಕೊಡಬಾರದು. ಇದೊಂದು ಬೇಸ್ಲೆಸ್ ಆರೋಪ. ಮೋದಿ ಸರ್ಕಾರ 100 % ಭ್ರಷ್ಟ ಸರ್ಕಾರ ಅಂತ ಆರೋಪ ಮಾಡ್ತೇನೆ ಅದನ್ನು ನೀವು ಹಾಕ್ತೀರಾ.? ಒಬ್ಬ ಪ್ರಧಾನಿ ಈ‌ ಮಟ್ಟಕ್ಕೆ ಇಳಿದು ಮಾತನಾಡಬಾರದು. ಅವರ ಬಳಿ ಇಂಟೆಲಿಜೆನ್ಸ್ ಸೇರಿದಂತೆ ಹಲವು ಇಲಾಖೆಗಳಿವೆ. ಇಂತಹ ಆರೋಪ ಮಾಡುವ ಮುನ್ನ ಯೋಚನೆ ಮಾಡಬೇಕು. ಕಳೆದ ಐದು ವರ್ಷದಲ್ಲಿ ಎಮೋಷನಲ್ ಇಶ್ಯೂ ಬಿಟ್ಟು ಬೇರೆ ಏನು‌‌ ಮಾತನಾಡಿಲ್ಲ. ರಾಹುಲ್ ಗಾಂಧಿ ವಯನಾಡಲ್ಲಿ  ನಿಲ್ಲೋದನ್ನೂ ಕಮೆಂಟ್ ಮಾಡ್ತಾರೆ. ಅಲ್ಲಿ ಮೈನರಿಟಿ ಇರುವುದರಿಂದ ಅಲ್ಲಿ ನಿಲ್ಲುತ್ತಿದ್ದಾರೆ ಎಂದು ಕಮೆಂಟ್ ಮಾಡ್ತಾರೆ. ಇದು ಕಮ್ಯೂನಲ್ ವಯಲೆನ್ಸ್ ಆಗಲ್ವಾ? ಇಂತಹ ಹೇಳಿಕೆಯನ್ನು ಪ್ರಧಾನಿ ಕೊಡಬಹುದಾ ಎಂದು ಪ್ರಶ್ನಿಸಿದರು.

ಚುನಾವಣೆ ಹಿನ್ನೆಲೆ ಜನರ ಮೂಡ್ ಹೇಗಿದೆ ಅನ್ನೋ ವಿಚಾರಕ್ಕೆ ಪ್ರತಿಕ್ರಿಯಿಸಿ ಮೂಡ್ ಅಂದ್ರೆ ಏನು.? ಮೂಡ್ ಅಂದ್ರೆ ಬೇರೆ ಕಣಪ್ಪ. ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ. ಈಗ ಇರೋದು ಜನರ ಅಭಿಪ್ರಾಯ ಅಷ್ಟೇ. ಜನರು ಕಾಂಗ್ರೆಸ್ ಪರವಾಗಿ, ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಅದು ಮೂಡ್ ಅಲ್ಲ ಅದು ಜನರ ಅಭಿಪ್ರಾಯ. ನೀವ್ ಯಾವ್ ಮೂಡ್ ಅಲ್ಲಿ ಕೇಳ್ತಿದ್ದೀರೋ ನನಗೆ ಗೊತ್ತಿಲ್ಲ. ಮೂಡ್ ಬೇರೆ, ಜನರ ಅಭಿಪ್ರಾಯ ಬೇರೆ ಎಂದು ಹಾಸ್ಯ ಮಾಡಿದರು.

ನಾನು, ಜಿ.ಟಿ.ದೇವೇಗೌಡ ಕ್ಷೇತ್ರ ಪ್ರವಾಸ ಮಾಡಿದ ಮೇಲೆ ವಾತಾವರಣ  ಬದಲಾಗಿದೆ. ಜನ ಮೈತ್ರಿ ಅಭ್ಯರ್ಥಿ ಕಡೆ ಒಲವು ತೋರುತ್ತಿದ್ದಾರೆ. ನಮ್ಮ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ ಎಂದರು. ಲೋಕಸಭೆ ಚುನಾವಣೆ ಬಳಿಕ ಮೋದಿ ಮನೆಗೆ ಹೋಗ್ತಾರೆ. ಅಮಿತ್ ಷಾಗೆ ಬೇಲ್ ಕ್ಯಾನ್ಸಲ್ ಆಗ್ಬಹುದು ಎಂದು ಪರೋಕ್ಷವಾಗಿ ಅಮಿತ್ ಷಾ ಜೈಲಿಗೆ ಹೋಗ್ತಾರೆ ಎಂದರು.  ಜನರ ಸಮಸ್ಯೆ ಬಗ್ಗೆ ಒಂದು ದಿನಾನೂ ಮಾತನಾಡಿಲ್ಲ. ಪ್ರಧಾನಿಯಾಗಿ ಸನ್ಯಾಸತ್ವ, ಪರ್ಸಂಟೇಜ್ ಬಗ್ಗೆ ಮಾತನಾಡ್ತಾರೆ 5ವರ್ಷದ ಅವರ ಸಾಧನೆ ವಿಚಾರವನ್ನು ಮಾತನಾಡುವುದಿಲ್ಲ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: