ಪ್ರಮುಖ ಸುದ್ದಿಮೈಸೂರು

ಮತದಾನ ಮಾಡಿದವರಿಗೆ ರಿಯಾಯಿತಿ ದರದಲ್ಲಿ ‘ನೃತ್ಯಂ’ ಚಿತ್ರ ಟಿಕೆಟ್

ಮೈಸೂರು,ಏ.15 : ಜಯಲಕ್ಷ್ಮೀ ಶ್ರೀನಿವಾಸ ಪಕ್ಚರ್ಸ್ ನಿಂದ ನಿರ್ಮಾಣಗೊಂಡಿರುವ ‘ನೃತ್ಯಂ’ ಮಕ್ಕಳ ಚಲನಚಿತ್ರ ಏ.19ರಂದು ಬಿಡುಗಡೆಗೊಳಲಿದೆ ಎಂದು ಚಿತ್ರದ ನಿರ್ಮಾಪಕ ಪ್ರವೀಣ್ ಲಾಡ್ ತಿಳಿಸಿದರು.

ಕೊಳಗೇರಿ ಮಕ್ಕಳು ನೃತ್ಯ ಸಾಧನೆ ಮಾಡುವ ಕಥಾ ಹಂದರವುಳ್ಳ ಚಿತ್ರದಲ್ಲಿ ಡ್ರಾಮ್ ಜ್ಯೂನಿಯರ್ ಖ್ಯಾತಿಯ ಮಹೇಂದ್ರ, ಮೈಸೂರಿನ ಮಕ್ಕಳಾದ ಶಶಿ, ಪುನೀತ್, ಗಗನ್ ಲಾಡ್, ಪ್ರಥಮ್ ಲಾಡ್, ಮಿಥಲಿ ಡಿಂಪಲ್ ಇನ್ನಿತರ ಬಾಲ ಕಲಾವಿದರು ಅಭಿನಯಿಸಿದ್ದಾರೆ. ಮೈಸೂರಿನ ಲಕ್ಷ್ಮೀ ಚಿತ್ರಮಂದಿರದಲ್ಲಿ ಚಿತ್ರ ಪ್ರದರ್ಶನಗೊಳ್ಳಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶೇಷ ರಿಯಾಯಿತಿ :  ಮತದಾನವನ್ನು ಪ್ರೋತ್ಸಾಹಿಸುವ ಸಲುವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದವರು ಶಾಹಿ ಗುರುತಿರುವ ಬೆರಳು ತೋರಿಸಿದವರಿಗೆ ವಿಶೇಷ ರಿಯಾಯಿತಿ ದರದಲ್ಲಿ ಚಿತ್ರದ ಟಿಕೆಟ್ ನೀಡಲಿದ್ದು, ಈ ವ್ಯವಸ್ಥೆಯನ್ನು ನಗರದ 650 ನಂದಿನಿ ಹಾಲಿನ ಕೇಂದ್ರಗಳಲ್ಲಿ ಮಾಡಿಲಾಗಿದೆ ಎಂದು ಹೇಳಿದರು.

ನಂದಿನಿ ಹಾಲು ಮಾರಾಟಗಾರರ ಸಂಘದ ಅಧ್ಯಕ್ಷ ಕುಮಾರ್ ಮಾತನಾಡಿ ಮತದಾನ ನಡೆದ ಮರುದಿನ ಬೆಳಗ್ಗೆ 6 ರಿಂದ 10 ಗಂಟೆಯವರೆಗೆ ಮತದಾನ ಮಾಡಿದ ಗುರುತು ತೋರಿ ಪ್ರತಿ ಲೀಟರ್ ಗೆ 2.ರೂ.ಗಳ ರಿಯಾಯಿತಿಯನ್ನ ಟಿ.ಕೆ.ಬಡಾವಣೆ, ವಿಜಯಬ್ಯಾಂಕ್ ವೃತ್ತದಲ್ಲಿರುವ ನಮ್ಮ ಹಾಲಿನ ಕೇಂದ್ರದಿಂದ ಪಡೆದುಕೊಳ್ಳಬಹುದು ಎಂದರು.

ಚಿತ್ರದ ನಿರ್ದೇಶಕ ಮೈಸೂರು ರಾಜು, ಬಾಲ ನಟರಾದ ಗಗನ್, ತೇಜಸ್ಸು, ಪ್ರಥಮ್, ಶಶಿ, ಇತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: