ಮನರಂಜನೆ

ಇಸ್ಕಾನ್ ಮಂದಿರಕ್ಕೆ ಭೇಟಿ ನೀಡಿದ ಶಿಲ್ಪಾ ಶೆಟ್ಟಿ

ಮುಂಬೈ,ಏ.15-ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇಸ್ಕಾನ್ ಮಂದಿರಕ್ಕೆ ಭೇಟಿ ನೀಡಿ ಭಗವಾನ್ ಶ್ರೀಕೃಷ್ಣನ ದರ್ಶನ ಪಡೆದರು.

ಮುಂಬೈ ಜುಹು ಪ್ರದೇಶದಲ್ಲಿರುವ ಇಸ್ಕಾನ್ ಮಂದಿರಕ್ಕೆ ಪುತ್ರ ವಿಹಾನ್ ರಾಜ್ ಕುಂದ್ರಾ, ತಾಯಿ ಸುನಂದಾ ಶೆಟ್ಟಿ, ತಂಗಿ ಶಮಿತಾ ಶೆಟ್ಟಿ ಜೊತೆ ಆಗಮಿಸಿದ್ದ ಶಿಲ್ಪಾ ಶೆಟ್ಟಿ ಕೃಷ್ಣನ ದರ್ಶನ ಪಡೆದರು. ಶ್ರೀರಾಮನವಮಿ ನಿಮಿತ್ತ ಸಾಂಪ್ರದಾಯಿಕ ಉಡುಗೆಯಲ್ಲಿ, ನಾಮಧಾರಿಯಾಗಿ ಶಿಲ್ಪಾ ಶೆಟ್ಟಿ ಕಂಗೊಳಿಸುತ್ತಿದ್ದರು.

ಇತ್ತೀಚೆಗೆ ಫಿಲಂ ಮೇಕರ್ ಅನುರಾಗ್ ಬಸು ಅವರು ಕಳುಹಿಸಿರುವ ಫ್ರಾಂಕ್ ಮೆಸೇಜ್ ಈಗ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ತಮಾಷೆಗೆ ಕಳುಹಿಸಿದ ಮೆಸೇಜ್ ಬಾಲಿವುಡ್ ವಲಯದಲ್ಲಿ ಚರ್ಚಾಸ್ಪದ ಸಂಗತಿಯಾಗಿತ್ತು. ರಾಜ್ ಕುಂದ್ರಾಗೆ ಶಿಲ್ಪಾ ಶೆಟ್ಟಿ ವಿಚ್ಛೇದನ ನೀಡಿದ್ದಾರೆ ಎಂಬ ಸಂಗತಿ.

ಸೂಪರ್ ಡ್ಯಾನ್ಸರ್ 3 ರಿಯಾಲಿಟಿ ಶೋನ ಭಾಗವಾಗಿ ಅನುರಾಗ್ ಬಸು ಅವರು ಶಿಲ್ಪಾ ಶೆಟ್ಟಿ ಫೋನ್ನಿಂದ ಅವರ ತಾಯಿಗೆ ಒಂದು ಮೆಸೇಜ್ ಕಳುಹಿಸಿದರು. “ರಾಜ್ ಕುಂದ್ರಾಗೆ ವಿಚ್ಛೇದನ ನೀಡಿದ್ದೀನಿಎಂಬ ಸಂದೇಶ ಕಳುಹಿಸಿದ್ದರು. ಆದರೆ ಶಿಲ್ಪಾ ಶೆಟ್ಟಿ ದಾಂಪತ್ಯ ಜೀವನ ಚೆನ್ನಾಗಿದೆ. (ಎಂ.ಎನ್)

Leave a Reply

comments

Related Articles

error: