ಕ್ರೀಡೆಪ್ರಮುಖ ಸುದ್ದಿ

ಮತದಾನದ ಹಕ್ಕಿನಿಂದಲೇ ವಂಚಿತರಾಗಿದ್ದಾರೆ ಚುನಾವಣಾ ಆಯೋಗದ ರಾಯಭಾರಿ ರಾಹುಲ್ ದ್ರಾವಿಡ್ !

ರಾಜ್ಯ(ಬೆಂಗಳೂರು)ಏ.15:- ಚುನಾವಣಾ ಆಯೋಗದ ರಾಯಭಾರಿಯಾಗಿರುವ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಈ ಬಾರಿ ಮತದಾನದ ಹಕ್ಕಿನಿಂದಲೇ ವಂಚಿತರಾಗಿದ್ದಾರೆ.

ರಾಹುಲ್ ದ್ರಾವಿಡ್ ತಮ್ಮ ನಿವಾಸವನ್ನು ಬದಲಾಯಿಸಿದ್ದು, ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.  ದ್ರಾವಿಡ್ ಅವರು ತಮ್ಮ ನಿವಾಸವನ್ನು ಕಳೆದ ಕೆಲದಿನಗಳ ಹಿಂದೆಯೇ ಬದಲಾಯಿಸಿದ್ದರು. ಅವರು ಮೊದಲು ಶಾಂತಿನಗರದಲ್ಲಿ ವಾಸವಿದ್ದು, ಇದೀಗ ಮತ್ತಿಕೆರೆಯ ಅಶ್ವತ್ಥ ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ. ಮಾರ್ಚ್ 16ಕ್ಕೂ ಮೊದಲೆ ಫಾರ್ಮ್ ನಂಬರ್ 6ನ್ನು ನೀಡಿದ್ದರೆ ಅವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬಹುದಿತ್ತು. ನೂತನ ವಿಳಾಸದಲ್ಲಿ ರಾಹುಲ್ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸದ ಕಾರಣ ಮತದಾನದ ಹಕ್ಕಿನಿಂದ ಈ ಬಾರಿ ವಂಚಿತರಾಗಿದ್ದಾರೆ ಎನ್ನಲಾಗಿದೆ. ಚುನಾವಣಾಧಿಕಾರಿಗಳು ಹಲವು ಬಾರಿ ಅವರ ಮನೆಗೆ ಭೇಟಿ ನೀಡಿದ್ದರೂ ಅವರ ಹೆಸರನ್ನು ಸೇರಿಸಲಾಗಿಲ್ಲ. ಯಾಕೆಂದರೆ ಅವರು ಆ ವೇಳೆ ವಿದೇಶ ಪ್ರವಾಸದಲ್ಲಿದ್ದರು ಎನ್ನಲಾಗಿದೆ.  (ಎಸ್.ಎಚ್)

 

Leave a Reply

comments

Related Articles

error: