ಮನರಂಜನೆ

`ಭಾರತ್’ ಸಿನಿಮಾದಲ್ಲಿನ ಸಲ್ಮಾನ್ ಖಾನ್ ಲುಕ್ ರಿಲೀಸ್

ಮುಂಬೈ,ಏ.15- ಅಲಿ ಅಬ್ಬಾಸ್ ಜಾಫರ್ ನಿರ್ದೇಶನದಲ್ಲಿ ಮೂಡಿಬಂದಿರುವ ಭಾರತ್ ಸಿನಿಮಾದಲ್ಲಿನ ಸಲ್ಮಾನ್ ಖಾನ್ ಲುಕ್ ರಿಲೀಸ್ ಆಗಿದೆ.

ಸಲ್ಮಾನ್ ಖಾನ್ ವಯಸ್ಸಾದ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವಯಸ್ಸಾದ ಲುಕ್ ನಲ್ಲೂ ಸಲ್ಮಾನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಬಿಳಿ ಕೂದಲನ್ನು ಸ್ಪೈಕ್ ಮಾಡಿ, ಉದ್ದ ಮೀಸೆ ಬಿಟ್ಟು, ಕನ್ನಡಕ ಧರಿಸಿರುವ ಸಲ್ಮಾನ್ ಲುಕ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಸಲ್ಮಾನ್ ಖಾನ್ ನ ಈ ಗೆಟಪ್ ವೈರಲ್ ಆಗಿದ್ದು, ಟ್ಟಿಟ್ಟರ್ ನಲ್ಲಿ ಮೂರನೇ ಟ್ರೆಂಡಿಂಗ್ ನಲ್ಲಿದೆ.

ಚಿತ್ರದ ಹೊಸ ಪೋಸ್ಟರ್ ಅನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಸಲ್ಮಾನ್ ಖಾನ್ ಚಿತ್ರದ ಒಂದು ಡೈಲಾಗ್ ಅನ್ನು ಬಹಿರಂಗ ಪಡಿಸಿದ್ದಾರೆ. `ನನ್ನ ತಲೆ ಮತ್ತು ದಾಡಿಯಲ್ಲಿ ಎಷ್ಟು ಬಳಿ ಕೂದಲು ಇದಿಯೋ ಅದಕ್ಕಿಂತಲು ಎಷ್ಟೋ ಹೆಚ್ಚು ಪಟ್ಟು ಕಲರ್ ಫುಲ್ ಆಗಿದೆ ನನ್ನ ಜೀವನಎಂದು ಬರೆದುಕೊಂಡಿದ್ದಾರೆ.

ಪೋಸ್ಟರ್ ನಲ್ಲಿ ನಟ ಜಾಕಿ ಶ್ರಾಫ್ ಕೂಡ ಕಾಣಿಸಿಕೊಂಡಿದ್ದಾರೆ. ಜಾಕಿ ಶ್ರಾಫ್ ಸಲ್ಮಾನ್ ಖಾನ್ ತಂದೆಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಭಾರತ್ ನಲ್ಲಿ ಸಲ್ಮಾನ್ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಭಾರತ್ನೈಜ ಘಟನೆ ಆಧಾರಿತ ಸಿನಿಮಾ. ಇತಿಹಾಸದ ಕತೆಯೊಂದನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಸಿನಿಮಾ ಪೂರ್ತಿ ರೆಟ್ರೋ ಸ್ಟೈಲ್ ನಲ್ಲಿ ಮೂಡಿ ಬಂದಿದೆ. ದೇಶ ಭಕ್ತಿ ಸಾರುವ ಸಿನಿಮಾ ಇದಾಗಿದೆ. ಅಂದ್ಹಾಗೆಭಾರತ್ದಕ್ಷಿಣ ಕೊರಿಯದಓಡೆ ಟು ಮೈ ಫಾದರ್ಚಿತ್ರದ ರಿಮೇಕ್ ಆಗಿದೆ.

ಭಾರತ್ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ಇದೆ. ನಟಿ ತಬು, ಕತ್ರಿನಾ ಕೈಫ್, ದಿಶಾ ಪಟಾನಿ, ಜಾಕಿ ಶ್ರಾಫ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ಸದ್ಯ ಪೋಸ್ಟರ್ ಮೂಲಕ ಸದ್ದು ಮಾಡುತ್ತಿರುವಭಾರತ್ ವರ್ಷದ ಈದ್ ನಲ್ಲಿ ತೆರೆಗೆ ಬರುತ್ತಿದೆ. (ಎಂ.ಎನ್)

 

Leave a Reply

comments

Related Articles

error: