ಕ್ರೀಡೆ

2019ರ ವಿಶ್ವಕಪ್ ಕ್ರಿಕೆಟ್ ಭಾರತ ತಂಡದ ಪಟ್ಟಿ ಪ್ರಕಟ : ಕಾರ್ತಿಕ್ –ಜಡೇಜಾಗೆ ಅವಕಾಶ, ರಿಷಬ್ ಪಂತ್ ಹೆಸರಿಲ್ಲ

ದೇಶ(ನವದೆಹಲಿ)ಏ.16:-  ಇಂಗ್ಲೆಂಡ್ ನಲ್ಲಿ ಮೇ.30ರಿಂದ ನಡೆಯಲಿರುವ  ಐಸಿಸಿ 2019 ಕ್ರಿಕೆಟ್ ವಿಶ್ವಕಪ್ ಗೆ ಭಾರತ ಕ್ರಿಕೆಟ್ ತಂಡದ ಪಟ್ಟಿಯನ್ನು ಬಿಸಿಸಿಐ ಪ್ರಕಟಗೊಳಿಸಿದೆ.

ವಿರಾಟ್ ಕೊಯ್ಲಿ ನಾಯಕತ್ವದಲ್ಲಿ 15ಮಂದಿ ಆಟಗಾರರ ಹೆಸರನ್ನು ಬಿಡುಗಡೆಗೊಳಿಸಲಾಗಿದೆ. ಈ ಪಟ್ಟಿಯಲ್ಲಿ ಅಂಬಾತಿ ರಾಯ್ಡೂ ಮತ್ತು ರಿಷಬ್ ಪಂತ್ ಅವರ ಹೆಸರಿಲ್ಲ. ಐದು ಆಯ್ಕೆದಾರರು ನಡೆಸಿದ ಸಭೆಯಲ್ಲಿ ದಿನೇಶ್ ಕಾರ್ತೀಕ್ ಮತ್ತು ರವೀಂದ್ರ ಜಡೇಜಾ ಅವರ ಮೇಲೆ ಭರವಸೆ ಇಡಲಾಗಿದೆ. ಆಯ್ಕೆದಾರರ ಸಮಿತಿಯ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಕ್ಯಾಪ್ಟನ್ ವಿರಾಟ್ ಕೊಯ್ಲಿಯನ್ನು ಆಯ್ಕೆ ಮಾಡಲಾಗಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ ರಿಗೆ ವೈಸ್ ಕ್ಯಾಪ್ಟನ್ ಜವಾಬ್ದಾರಿ ನೀಡಲಾಗಿದೆ. ತಂಡದಲ್ಲಿ ಐವರು ವಿಶೇಷ ಬೌಲರ್, ಇಬ್ಬರು ವಿಕೇಟ್ ಕೀಪರ್-ಬೌಲರ್, ಮೂವರು ಸ್ಪಿನ್ನರ್, ಇಬ್ಬರು ಆಲ್ ರೌಂಡರ್, ಮೂವರು ವೇಗದ ಬೌಲರ್ ಗಳಿದ್ದಾರೆ ಎಂದಿದ್ದಾರೆಂದು ಮಾಧ್ಯಮವೊಂದು ವರದಿ ಮಾಡಿದೆ.

ತಂಡದಲ್ಲಿ ವಿರಾಟ್ ಕೊಯ್ಲಿ, ರೋಹಿತ್ ಅಲ್ಲದೇ ಅನುಭವಿ ಆಟಗಾರ ಮಹೇಂದ್ರ ಸಿಂಗ್ ಧೋನಿಗೂ ಅವಕಾಶ ನೀಡಲಾಗಿದೆ. 2011ರಲ್ಲಿ ಭಾರತ ತಂಡಕ್ಕೆ ವಿಶ್ವಕಪ್ ದೊರಕಿಸಿಕೊಟ್ಟಿದ್ದರು. ಈಗ ತಂಡದಲ್ಲಿ ನಾಯಕ ವಿರಾಟ್ ಕೊಯ್ಲಿ, ಉಪನಾಯಕ ರೋಹಿತ್ ಶರ್ಮಾ, ವಿಕೇಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ, ಶಿಖರ್ ಧವನ್, ಕೆ.ಎಲ್.ರಾಹುಲ್, ಕೇದಾರ್ ಜಾಧವ್, ದಿನೇಶ್ ಕಾರ್ತೀಕ್, ಹಾರ್ದಿಕ್ ಪಾಂಡ್ಯ, ವಿಜಯ್ ಶಂಕರ್, ಕುಲ್ದೀಪ್ ಯಾದವ್, ಯಜುವೇಂದ್ರ ಚಹಲ್, ಜಸ್ಪ್ರೀತ್ ಬುಮ್ರಾಹ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ರವೀಂದ್ರ ಜಡೇಜಾ ಇದ್ದಾರೆ ಎನ್ನಲಾಗಿದೆ. (ಎಸ್.ಎಚ್)

 

 

Leave a Reply

comments

Related Articles

error: