ಮನರಂಜನೆ

ನಟ ಪ್ರೇಮ್ ಮಗಳು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ

ಬೆಂಗಳೂರು,ಏ.15-ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದೆ. ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಪ್ರಥಮ ಸ್ಥಾನದಲ್ಲಿದ್ದು, ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ನಟ ನೆನಪಿರಲಿ ಪ್ರೇಮ್ ಪುತ್ರಿ ಕೂಡ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಈ ಸಂತಸದ ವಿಚಾರವನ್ನು ಪ್ರೇಮ್ ಟ್ವಿಟರ್ ಮೂಲಕ ತಿಳಿಸಿದ್ದಾರೆ.

ಪ್ರೇಮ್ ಮಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.91 ರಷ್ಟು ಅಂಕಗಳಿಸಿ ತೇರ್ಗಡೆಯಾಗಿದ್ದಾರೆ. ಪ್ರೇಮ್ ಪುತ್ರ ಏಕಾಂತ್ ಸದ್ಯ ಎಂಟನೇ ತರಗತಿಯಲ್ಲಿ 3ನೇ ರಾಂಕ್ ಬಂದಿದ್ದಾರೆ. ಮಕ್ಕಳ ಸಾಧನೆ ತಂದೆ ತಾಯಿ ಮುಖದಲ್ಲಿ ಖುಷಿ ಮೂಡಿಸಿದೆ. ಖುಷಿಯ ಸಂದರ್ಭದಲ್ಲಿ ಪ್ರೇಮ್ ಫ್ಯಾಮಿಲಿ ಸೆಲ್ಫಿ ತೆಗೆದುಕೊಂಡು ಅದನ್ನು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. (ಎಂ.ಎನ್)

Leave a Reply

comments

Related Articles

error: