ಮೈಸೂರು

ಬ್ಯಾಗ್ ನಲ್ಲಿಟ್ಟ ಚಿನ್ನಾಭರಣ ಕಳವು

ಬೆಂಗಳೂರಿನಿಂದ ಮೈಸೂರಿಗೆ ಕೆ ಎಸ್ ಆರ್ ಟಿ ಸಿ  ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್ ನಲ್ಲಿದ್ದ 115 ಗ್ರಾಂ ಚಿನ್ನಾಭರಣ ಕಳವಾಗಿರುವ ಘಟನೆ  ನಡೆದಿದೆ.

ಬೆಂಗಳೂರಿನ ಬಬಿತಾ ಎಂಬುವವರೇ ಚಿನ್ನಾಭರಣ ಕಳೆದುಕೊಂಡವರು. ಬಬಿತಾ ಅವರು ನಾಲ್ಕು ಬ್ಯಾಗ್ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನ ಗೊಟ್ಟಿಗೇರಿಯಿಂದ ಮೈಸೂರಿಗೆ ಪ್ರಯಾಣ ಬೆಳೆಸಿದ್ದರು.  ನಗರದ ಬಸ್ ನಿಲ್ದಾಣಕ್ಕೆ ಬಂದ ಬಳಿಕ ಬ್ಯಾಗ್ ಪರಿಶೀಲಿಸಿದಾಗ ಚಿನ್ನಾಭರಣ ಕಳವಾಗಿರುವುದು ಗಮನಕ್ಕೆ ಬಂದಿದೆ.

ಪ್ರಕರಣ ಲಷ್ಕರ್ ಠಾಣೆಯಲ್ಲಿ  ದಾಖಲಾಗಿದೆ.

Leave a Reply

comments

Related Articles

error: