ಸುದ್ದಿ ಸಂಕ್ಷಿಪ್ತ

ಏ.16: ಮಂಡ್ಯದಲ್ಲಿ ಪ್ರಜ್ಞ ಮತದಾನ ಮತ್ತು ರೀಕಾಲಿಂಗ್ ಸಿಸ್ಟ್‍ಮ್ ಬೇಡಿಕೆ ಅನಿವಾರ್ಯತೆ ಕುರಿತು ಸಂವಾದ ಕಾರ್ಯಕ್ರಮ

ಮಂಡ್ಯ (ಏ.15): ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ಮಂಡ್ಯ ರಾಜ್ಯ ಶೈಕ್ಷಣಿಕ ದಿಕ್ಸೂಚಿ ಮತ್ತು ಸುಧಾರಣಾ ಸಮಿತಿ ಮೈಸೂರು, ಪಿ.ಇ.ಎಸ್ ಕಾಲೇಜು ಆಫ್ ಇಂಜಿಯರಿಂಗ್ ಮಂಡ್ಯ ಇವರ ವತಿಯಿಂದ ಪ್ರಜ್ಞ ಮತದಾನ ಮತ್ತು ರೀಕಾಲಿಂಗ್ ಸಿಸ್ಟ್‍ಮ್ ಬೇಡಿಕೆ ಅನಿವಾರ್ಯತೆ ಒಂದು ಸಂವಾದ ಕಾರ್ಯಕ್ರಮವನ್ನು ಏಪ್ರಿಲ್ 16 ರಂದು ಮಧ್ಯಾಹ್ನ 12.30 ಗಂಟೆಗೆ ಪಿ.ಇ.ಎಸ್. ಇಂಜಿನಿಯರಿಂಗ್ ಕಾಲೇಜು ಪ್ಲೆಸ್‍ಮೆಂಟ್ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾ ಡಾ|| ಅವಿನಾಶ್ ಮೆನನ್ ರಾಜೇಂದ್ರನ್ ರವರು ಕಾರ್ಯಕ್ರಮದ ಉದ್ಘಾಟನೆ ಮಾಡುವರು. ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ವಿ.ರವೀಂದ್ರ ರವರು ಅಧ್ಯಕ್ಷತೆ ವಹಿಸುವರು ಸಂವಿಧಾನ ವಿಶ್ಲೇಷಕ ಹಾಗೂ ರಾಜಾಧ್ಯಕ್ಷರಾದ ಡಾ.ಸುಧಾಕರ ಹೊಸಳ್ಳಿ ರವರು ಪ್ರಧಾನ ವಿಷಯ ಮಂಡನೆಯನ್ನು ಮಾಡುವರು ತಿಳಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: