ಮೈಸೂರು

ದಸರಾ ಆಹಾರ ಮೇಳ ಸವಿಭೋಜನ ಸ್ಪರ್ಧೆ: ಹೆಸರು ನೋಂದಾಯಿಸಿಕೊಳ್ಳಲು ಅ.5 ಕೊನೆ ದಿನ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದಂಗವಾಗಿ ಜನಪ್ರಿಯ ಆಹಾರ ಮೇಳದಲ್ಲಿ ಜಾನಪದ ಅಡುಗೆ, ಮೈಸೂರು ಊಟ, ಸಿರಿಧಾನ್ಯ ಹಾಗೂ ಹಸಿರು ಊಟವನ್ನು ಉಣಬಡಿಸುವ ಆದ್ಯತೆ ಮೇರೆಗೆ ‘ಸವಿಭೋಜನ’. ಮಕ್ಕಳ ಆಹಾರ ಜ್ಞಾನ ಹಾಗೂ ‘ಆಹಾರ ರಸಲೋಕ’ ರಸಪ್ರಶ್ನೆ ಸ್ಪರ್ಧೆಗಳನ್ನು  ಅ.2 ರಿಂದ ಅ.9 ರ ವರೆಗೆ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್   – ಬೇಡನ್ ಪೋವಲ್ ಶಾಲಾ ಆವರಣದಲ್ಲಿ ಆಯೋಜಿಸಲಾಗಿದೆ.

ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ನಡೆಯಲಿರುವ ಸವಿ ಭೋಜನ ಸ್ಪರ್ಧೆಯಲ್ಲಿ ಮಹಿಳೆಯರು, ಪುರುಷರು, ಶಾಲಾ/ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ, ಪ್ರತಿಯೊಂದು ವಿಭಾಗದಲ್ಲೂ ಪ್ರತ್ಯೇಕ ದಿನದಂದು ಸ್ಪರ್ಧೆಗಳು ಜರುಗುವವು.

ನಳಪಾಕ ಸ್ಪರ್ಧೆಯಲ್ಲಿ:  ಅ.7 ರಂದು ಪುರುಷರಿಗೆ ಮೊಟ್ಟೆ, ಮಹಿಳೆಯರಿಗೆ ಇಡ್ಲಿ, ಅ.8ರಂದು ಕಾಲೇಜು ವಿದ್ಯಾರ್ಥಿನಿಯರಿಗೆ ಜಿಲೇಬಿ, ವಿದ್ಯಾರ್ಥಿಗಳಿಗೆ ಮೈಸೂರು ಪಾಕ್ ತಿನ್ನುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಮತ್ತು ಅ.9 ರಂದು ಕುಟುಂಬಗಳಿಗಾಗಿ ‘ನಿಮ್ಮ ಕುಟುಂಬ – ನಮ್ಮ ಪ್ರಶ್ನೆ’ ಕ್ವಿಜ್ ನ್ನು ಆಯೋಜಸಿಲಾಗಿದೆ.

ವಿಶೇಷ ಸೂಚನೆ :

ಸ್ಪರ್ಧೆಯಲ್ಲಿ ಭಾಗವಹಿಸುವರಿಗೆ ಗುರುತಿನ ಚೀಟಿ ಕಡ್ಡಾಯ, ಆಹಾರ ಸೇವಿಸುವ ಪ್ರಮಾಣ ಹಾಗೂ ವೇಗದ ಜೊತೆ ತಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕು, ಸ್ಪರ್ಧೆ ಆರಂಭಕ್ಕೂ 30 ನಿಮಿಷ ಮುನ್ನ ಸ್ಥಳದಲ್ಲಿ ಹಾಜರಿರಬೇಕು. ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.

ಸವಿಭೋಜನ ಸರ್ಧೆಯಲ್ಲಿ ಭಾಗವಹಿಸುವರು, ಅ.5 ರಂದು ಸಂಜೆ 5 ರೊಳಗೆ  ಆರ್ಜಿ ಸಲ್ಲಿಸಬೇಕು, ಸ್ಪರ್ಧೆಗಳ ಸಂಚಾಲಕ ಕಾಳನಾಯಕ, ಆಹಾರ ನಿರೀಕ್ಷಕರಾದ ಅನಸೂಯ ಮತ್ತು ಲಕ್ಷ್ಮಿ ಇವರಲ್ಲಿ ನೊಂದಾಯಿಸಿಕೊಳ್ಳಬಹುದು. ಅರ್ಜಿ ನಮೂನೆಯನ್ನು  ಸೆ.27 ರಂದು ಸಂಜೆ 5ರೊಳಗೆ ಆಹಾರಮೇಳ ಕಛೇರಿ, (ಆಹಾರ ಉಪನಿರ್ದೇಶಕರು, ಜಿಲ್ಲಾಧಿಕಾರಿಗಳ ಕಛೇರಿ) ಪಡೆಯಬಹುದು. ಅನಿಸಿಕೆ ಮತ್ತು ಸಮಸ್ಯೆಗಳನ್ನು ಇ ಮೇಲ್ –[email protected]. ಮೂಲಕ ಹಂಚಿಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 98866 83298, 99451 81156, 99728 29719 ಅನ್ನು ಸಂಪರ್ಕಿಸಬಹುದು.

Leave a Reply

comments

Related Articles

error: