ದೇಶಪ್ರಮುಖ ಸುದ್ದಿ

ದಿನಕ್ಕೆ 24 ಸಾವಿರ ರೂ ಡ್ರಾ ಮಾಡಬಹುದು: ಆರ್‍.ಬಿ.ಐ

ನವದೆಹಲಿ: ಎಟಿಎಂನಿಂದ ಹಣ ಡ್ರಾ ಮಾಡುವ ದೈನಂದಿನ ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೆಚ್ಚಿಸಿದೆ. ಫೆ.1ರಿಂದ ದಿನವೊಂದಕ್ಕೆ 10 ಸಾವಿರ ರೂಪಾಯಿಯಿಂದ 24 ಸಾವಿರಕ್ಕೆ ವಿತ್‍ ಡ್ರಾ ಮಿತಿಯನ್ನು ಹೆಚ್ಚಿಸಲಾಗಿದೆ ಎಂದು ಆರ್‍.ಬಿ.ಐ ಪ್ರಕಟಣೆ ತಿಳಿಸಿದೆ.

ಆದರೆ ವಾರಕ್ಕೆ 24 ಸಾವಿರ ರೂ ಮಾತ್ರ ಡ್ರಾ ಮಾಡಬಹುದು ಎಂಬ ಮಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಗ್ರಾಹಕರು ಅಗತ್ಯವಿದ್ದಾಗ 24 ರೂಪಾಯಿಗಳನ್ನು ಒಂದೇ ದಿನದಲ್ಲಿ ಎಟಿಎಂನಿಂದ ಡ್ರಾ ಮಾಡಿಕೊಳ್ಳಬಹುದು.

ದಿನಕ್ಕೆ 10 ಸಾವಿರ ರೂ ಮಾತ್ರ ಡ್ರಾ ಮಾಡಬಹುದು ಎಂಬ ಮಿತಿಯಿಂದ ಗ್ರಾಹಕರು ವಾರದಲ್ಲಿ ಮೂರು ಬಾರಿ ಎಟಿಎಂಗಳಿಗೆ ಎಡತಾಕಬೇಕಿತ್ತು. ಆದರೆ ಈಗ ಒಂದು ಬಾರಿ ಎಟಿಎಂಗೆ ಭೇಟಿ ನೀಡಿ 24 ಸಾವಿರ ರೂ ಹಣ ಡ್ರಾ ಮಾಡಬಹುದಾಗಿದೆ.

ದೈನಂದಿನ ವಿತ್‍ ಡ್ರಾ ಮಿತಿ ಸಿಡಿಲಗೊಳಿಸಿದರೂ ಬ್ಯಾಂಕ್‍’ಗಳು ತಮ್ಮ ಎಟಿಎಂಗಳಲ್ಲಿ ಹಣ ವಿತ್‍ಡ್ರಾ ಮಾಡುವ ಸಂಬಂಧ ಮಿತಿ ಹೇರಬಹುದಾಗಿದೆ. ಈ ಅವಕಾಶವನ್ನು ರಿಸರ್ವ್ ಬ್ಯಾಂಕ್ ಬ್ಯಾಂಕ್‍ಗಳಿಗೆ ನೀಡಿದೆ. ಹೀಗಾಗಿ ಬೇರೆ ಬೇರೆ ಬ್ಯಾಂಕ್‍ಗಳ ಎಟಿಎಂಗಳಲ್ಲಿ ವಿತ್‍ಡ್ರಾ ಮಾಡುವ ಮಿತಿ ವ್ಯತ್ಯಾಸವಾಗುವ ಸಾಧ್ಯತೆ ಇದೆ.

Leave a Reply

comments

Related Articles

error: