ಮೈಸೂರು

ಮೃಗಾಲಯದ ಪ್ರಾಣಿ-ಪಕ್ಷಿಗಳ ದತ್ತು ಸ್ವೀಕಾರ

ಮೈಸೂರು,ಏ.16:- ಮೈಸೂರು ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕಾರ ಯೋಜನೆಯಡಿಯಲ್ಲಿ ಹಲವರು ಒಂದು ವರ್ಷದ ಅವಧಿಗೆ ಪ್ರಾಣಿ ಪಕ್ಷಿಗಳನ್ನು ದತ್ತು ಸ್ವೀಕರಿಸಿದ್ದಾರೆ.

ಬಿ.ಜಿ.ಸತೀಶ್ ರಾಮನಗರ 1,000ರೂ.ಪಾವತಿಸಿ ಲವ್ ಬರ್ಡ್, ಕಾರ್ತಿಕೇಯ ಬೆಂಗಳೂರು 1,000ರೂ. ಫಿಂಚ್, ಜಿ.ಶಿವಾಜಿರಾವ್ ಜಾಧವ್ 1,000ರೂ. ಲವ್ ಬರ್ಡ್, ಪದ್ಮಾವತಿ ಬೆಂಗಳೂರು 5,000ರೂ. ನಾಲ್ಕು ಕೊಂಬಿನ ಜಿಂಕೆ, ವಿಮರ್ಶ ಜೈನ್ ಮಂಗಳೂರು 5,000ರೂ.ಲೆಪರ್ಡ್ ಕ್ಯಾಟ್, ಇಂಡಸ್ ಅರ್ಲಿ ಲರ್ನಿಂಗ್ ಸೆಂಟರ್-ಆರ್ ಎಂವಿ ಬೆಂಗಳೂರು 8,500ರೂ.ಬಿಳಿ ನವಿಲು ಮತ್ತು ರಿಂಗ್ ಟೈಲಡ್ ಲೆಮುರ್, ನಿಖಿಲ್ ಕೌಂಡಿನ್ಯ ಮೈಸೂರು 5,000ರೂ.ಗ್ರೇಟ್ ಹಾರ್ನ್ ಬಿಲ್, ಸುಧ ಆರ್.ಬೆಂಗಳೂರು 3,500ರೂ. ಕಾಳಿಂಗ ಸರ್ಪ, ಉಪಲಿ ಕೊಡಗು 5,000ರೂ.ಸ್ಮೂತ್ ಕೊಟೆಡ್ ಆಟರ್ ನ್ನು ದತ್ತು ಸ್ವೀಕರಿಸಿದ್ದಾರೆ. ಈ ಮಹತ್ವದ ಕೊಡುಗೆಯ ಮೂಲಕ ವನ್ಯಪ್ರಾಣಿ ಸಂರಕ್ಷಣೆ ಸತ್ಕಾರ್ಯದಲ್ಲಿ ಭಾಗವಹಿಸಿದ್ದಕ್ಕೆ ಅವರನ್ನು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕರು ಅಭಿನಂದಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: