ಪ್ರಮುಖ ಸುದ್ದಿಮೈಸೂರು

ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಜಯಭೇರಿ ಬಾರಿಸುತ್ತಾರೆ : ವಿಜಯೇಂದ್ರ ವಿಶ್ವಾಸ

ಮೈಸೂರು,ಏ.16:- ಅಭಿವೃದ್ಧಿ ಅಂದರೆ ಬಿ.ಎಸ್ ಯಡಿಯೂರಪ್ಪ, ಯಡಿಯೂರಪ್ಪ ಅಂದರೆ ಅಭಿವೃದ್ಧಿ, ಶಿವಮೊಗ್ಗ ಜಿಲ್ಲೆ ಅಭಿವೃದ್ಧಿ ಮಾಡುವುದು ಯಡಿಯೂರಪ್ಪನವರ ಕನಸಾಸಗಿದೆ ಎಂದು ಬಿಜೆಪಿ ಯುವಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಹೇಳಿದ್ದಾರೆ.

ಮೈಸೂರಿನಲ್ಲಿ ನಿನ್ನೆ  ಮೈಸೂರು-ಕೊಡಗು ಅಭ್ಯರ್ಥಿ ಪ್ರತಾಪ್ ಸಿಂಹ ಪರ ಮತ ಪ್ರಚಾರಕ್ಕೆ ಆಗಮಿಸಿದ ಅವರು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದರು.  ಮೋದಿ ಎಂಬುದು ಕೇವಲ ಮುಖ ಅಲ್ಲ, ಅದೊಂದು ಶಕ್ತಿ. ಮೋದಿ ಎಂಬ ಅಲೆ ಎಲ್ಲೆಡೆ ಹರಡಿ ಕೊಂಡಿದೆ. ಯಡಿಯೂರಪ್ಪ ಕನಸಿನಂತೆ ಬಿಜೆಪಿ ರಾಜ್ಯದಲ್ಲಿ 22 ಸ್ಥಾನ ಪಡೆಯಲಿದೆ ಎಂದರು.

ಬಿಜೆಪಿ ಅಭ್ಯರ್ಥಿಗಳಿಗೆ ಮುಖ ಇಲ್ಲ ಎಂಬ ಕಾಂಗ್ರೆಸ್ ಹೇಳಿಕೆಗೆ ತಿರುಗೇಟು ನೀಡಿದ ವಿಜಯೇಂದ್ರ, ಮೋದಿ ಸಭೆಗೆ ಕೇವಲ ಬಿಜೆಪಿ ಮಾತ್ರವಲ್ಲ ಸಾಮಾನ್ಯ ಜನರೂ ಬರ್ತಿದ್ದಾರೆ. ಇದೊಂದು ಬಾರಿ ಮೋದಿ ಪ್ರಧಾನಿ ಮಾಡುವ  ಆಸೆ ಜನರದ್ದು. ಜನರ ಆಸೆಯನ್ನು ನಾವು ಹುಸಿಗೊಳಿಸುವುದಿಲ್ಲ ಎಂದರು.

ಮೈತ್ರಿ ವಿಚಾರಕ್ಕೆ  ಪ್ರತಿಕ್ರಿಯಿಸಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಯಲ್ಲಿ ಬಿಜೆಪಿ ಕೊಚ್ಚಿ ಹೋಗಲ್ಲ, ಬದಲಾಗಿ ಮೋದಿ ಅಲೆಯಲ್ಲಿ ಅವರ ಸ್ಥಿತಿ ಏನಾಗುತ್ತೆ ಎಂಬುದನ್ನು ಕಾದು ನೋಡಿ ಎಂದು ಎಚ್ಚರಿಕೆ ನೀಡಿದರು.

ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕುಮಾರಸ್ವಾಮಿಗೆ ಜೆಡಿಎಸ್ ನವರೇ ಗೂಟಾ ಹೊಡಿತಾರೆ. ಮಂಡ್ಯ ಲೋಕಸಭಾ ಎಲೆಕ್ಷನ್ ನಲ್ಲಿ ಜೆಡಿಎಸ್ ಪಕ್ಷದವರು ಕುಮಾರಸ್ವಾಮಿಗೆ ಹೇಗೆ ಗೂಟ ಹೋಡಿತಾರೆ ನೋಡ್ತಿರಿ. ಮೇಲ್ನೋಟಕ್ಕೆ ಏನೇ ಮಾತಾಡಿದ್ರೂ, ಜೆಡಿಎಸ್ ಪಕ್ಷ ಕುಮಾರಸ್ವಾಮಿಗೆ ಯಾವ ರೀತಿ ಗೂಟ ಹೊಡಿತಾರೆ ಫಲಿತಾಂಶದ ದಿನ ನೋಡಿ ಎಂದರು.

ಸುಮಲತಾ ಪರ ಬ್ಯಾಟಿಂಗ್ ಮಾಡಿದ ಅವರು ಮಂಡ್ಯ ಮುನ್ಸಿಪಾರ್ಟಿ ಎಲೆಕ್ಷನ್ ಅಲ್ಲ. ಅಲ್ಲಿಯ ಜನ ಕೇವಲ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗಿ ಮತ ಹಾಕಲ್ಲ. ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ ಇದಾಗಿದೆ. ಪಕ್ಷೇತರ ಅಭ್ಯರ್ಥಿ ಸುಮಲತಾ ಬಹುಮತದಿಂದ ಗೆಲ್ಲುವ ವಿಶ್ವಾಸ ಇದೆ ಎಂದರು. ಬಿಜೆಪಿ ಬೇಷರತ್ ಬೆಂಬಲ ಕೊಟ್ಟಿರೋದು ಮಾತ್ರವಲ್ಲ, ಕಾಂಗ್ರೆಸ್ ಜೆಡಿಎಸ್ ಪಕ್ಷದವರೂ ಅವರಿಗೆ ಬೆಂಬಲ ನೀಡಿದ್ದಾರೆ. ಇಡೀ ಮಂಡ್ಯದಲ್ಲಿ ಸಾಮಾನ್ಯ ಮತದಾರ ಕೂಡ ಸುಮಲತಾ ಪರ ಎದ್ದು ನಿಂತಿದ್ದಾರೆ. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ಸುಮಲತಾ ಜಯಭೇರಿ ಬಾರಿಸುತ್ತಾರೆ ಎಂದು ಅವರು ಹೇಳಿದರು. (ಕೆ.ಎಸ್, ಎಸ್.ಎಚ್)

Leave a Reply

comments

Related Articles

error: