ಕರ್ನಾಟಕ

ದ್ವಿತೀಯ ಪಿ.ಯು.ಸಿ ಫಲಿತಾಂಶ ಪ್ರಕಟ: 6ನೇ ಸ್ಥಾನಕ್ಕೇರಿದ ಹಾಸನ ಜಿಲ್ಲೆ

ಹಾಸನ (ಏ.16): ಜಿಲ್ಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಫ್ರೆಶ್ ಆಗಿ ಹಾಜರಾದ ವಿದ್ಯಾರ್ಥಿಗಳು 13980, ತೇರ್ಗಡೆಯಾದ ವಿದ್ಯಾರ್ಥಿಗಳು-10511 ಶೇಕಡವಾರು 75.19, ಕಲಾ ವಿಭಾಗ ಶೇ 70.72 3951 ವಿದ್ಯಾರ್ಥಿಗಳಿಗೆ 2794 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, ವಾಣಿಜ್ಯ ವಿಭಾಗ ಶೇ 77.78 5639 ವಿದ್ಯಾರ್ಥಿಗಳಿಗೆ 4386 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, ವಿಜ್ಞಾನ ವಿಭಾಗ ಶೇ 75.88 4390 ವಿದ್ಯಾರ್ಥಿಗಳಿಗೆ 3331 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.

ನಗರ ಪ್ರದೇಶದಲ್ಲಿ ಶೇ 75.12 10737 ವಿದ್ಯಾರ್ಥಿಗಳಿಗೆ 8075 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, ಗ್ರಾಮೀಣ ಪ್ರದೇಶದಲ್ಲಿ ಶೇ 75.12 3243 ವಿದ್ಯಾರ್ಥಿಗಳಿಗೆ 2436 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ, ಬಾಲಕರು ಶೇ 63.17 , ಬಾಲಕಿಯರು ಶೇ 74.14 ಫಲಿತಾಂಶ ಸಾಧಿಸಿರುತ್ತಾರೆ.
ಹಾಸನ ಜಿಲ್ಲೆಯ 2019 ರ ದ್ವಿತೀಯ ಪಿಯುಸಿ ಫಲಿತಾಂಶವು 75.19 ಬಂದಿರುತ್ತದೆ. ರಾಜ್ಯದ 6 ನೇ ಸ್ಥಾನ ಪಡೆದು ಕಳೆದ ಬಾರಿಗಿಂತ ಉತ್ತಮ ಫಲಿತಾಂಶ ಬಂದಿರುತ್ತದೆ. (ಕಳೆದ ಶೈಕ್ಷಣಿಕ ಸಾಲಿನಲ್ಲಿ 73.87 ಬಂದಿದ್ದು 8 ನೇ ಸ್ಥಾನ ಪಡೆದಿತ್ತು).

ಶೇಕಡಾ 100 ರಷ್ಟು ಫಲಿತಾಂಶ ಪಡೆದ ಕಾಲೇಜುಗಳು, ಹಾಸನ ನಗರದ ಮಾಸ್ಟರ್ಸ್ ಪದವಿ ಪೂರ್ವ ಕಾಲೇಜು, ಸೆಂಟ್ರಲ್ ಕಾಮರ್ಸ್ ಪದವಿ ಪೂರ್ವ ಕಾಲೇಜು, ವಿದ್ಯಾನಿಕೇತನ ಪದವಿ ಪೂರ್ವ ಕಾಲೇಜು ಹಾಸನ, ಸರ್ಕಾರಿ ಪದವಿ ಪೂರ್ವ ಕಾಲೇಜು ಭುವನಹಳ್ಳಿ , ಸರ್ಕಾರಿ ಪದವಿ ಪೂರ್ವ ಕಾಲೇಜು ಬೈಲಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಯಸಳೂರು ಸಕಲೇಶಪುರ ತಾ, ಕೈಸ್ತ ಕಿಂಗ್ ಪದವಿ ಪೂರ್ವ ಕಾಲೇಜು ಚನ್ನರಾಯಪಟ್ಟಣ ಕಾಲೇಜುಗಳು ಶೇಕಡಾ 100 ರಷ್ಟು ಫಲಿತಾಂಶ ದಾಖಲಿಸಿವೆ.

ಈ ಬಾರಿಯ ಉತ್ತಮ ಫಲಿತಾಂಶ ದಾಖಲಿಸಿರುವುದಕ್ಕೆ ಜಿಲ್ಲೆಯ ಎಲ್ಲಾ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಉಪ ನಿರ್ದೇಶಕರಾದ ವಾಮರಾಜ ಇವರು ಅಭಿನಂದಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: