ಪ್ರಮುಖ ಸುದ್ದಿಮೈಸೂರು

ಯಡಿಯೂರಪ್ಪ ತಿಪ್ಪರಲಾಗ ಹಾಕಿದ್ರೂ ಸರ್ಕಾರ ಬೀಳಲ್ಲ : ಸಿದ್ದರಾಮಯ್ಯ ಸ್ಪಷ್ಟನೆ

ಐಟಿ ದಾಳಿ ಖಂಡಿಸಿ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು

ಮೈಸೂರು, ಏ.16 : ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ತಿಪ್ಪರಲಾಗ ಹಾಕಿದ್ರೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಬೀಳಿಸಲು ಸಾಧ್ಯವಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಪತ್ರಕರ್ತರ ಭವನದಲ್ಲಿ ಹಮ್ಮಿಕೊಂಡಿದ್ದ ಮಾಧ್ಯಮ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ಚುನಾವಣಾ ಫಲಿತಾಂಶ ನಂತರ ಈಗ ನಡೆಸುತ್ತಿರುವ ಹುನ್ನಾರಕ್ಕೆ ಕೊಂಚ ಇಂಬುಸಿಗಬಹುದೇ ಹೊರತು ಸರ್ಕಾರಕ್ಕೆ ಯಾವುದೇ ಧಕ್ಕೆ ಇಲ್ಲ ಎಂದು ಸ್ಪಷ್ಟಪಡಿಸಿ, ರಾಜ್ಯದಲ್ಲಿ ನಡೆಯುತ್ತಿರುವ ಆದಾಯ ತೆರಿಗೆ ದಾಳಿಯು ಚುನಾವಣಾ ಉದ್ದೇಶದಿಂದಲೇ ನಡೆಯುತ್ತಿದ್ದು ಕೇವಲ ಬಿಜೆಪಿಯೇತರರ ಮನೆ ಮೇಲೆಯೇ ನಡೆಯುತ್ತಿರುವುದು ಎಂದು ಪ್ರಶ್ನಿಸಿ. ಯಡಿಯೂರಪ್ಪ, ಶೋಭಾ, ಸಿ.ಟಿ.ರವಿ, ಅರವಿಂದ ಲಿಂಬಾವಳಿ, ಅಶೋಕ ಮನೆ ಮೇಲೆಯೂ ನಡೆಸಬಹುದಲ್ಲ ಅವರೇನು ಹರಿಶ್ಚಂದ್ರನ ಮೊಮ್ಮಕ್ಕಳ ಎಂದು ಕಿಡಿಕಾರಿದರು.

ಗೊಂದಲ ಎಂಬುದು ಊಹಾಪೋಹ :

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಹಾಗೂ ಕಾರ್ಯಕರ್ತರ ನಡುವೆ ಯಾವುದೇ ಗೊಂದಲವಿಲ್ಲ.‌ ಈಗಾಗಲೇ ಮಾಜಿ ‌ಪ್ರಧಾನಿ ದೇವೇಗೌಡ ಹಾಗೂ ನಾನು ಹಲವಾರು ಸಭೆಗಳನ್ನು ಮಾಡಿದ್ದು ಎಲ್ಲಿಯೂ ಗೊಂದಲಕ್ಕೆ ಆಸ್ಪದ ನೀಡಿಲ್ಲ, ಅಲ್ಲದೇ ಮೈತ್ರಿ ಸರ್ಕಾರವು ಜನ ಮನ್ನಣೆಯನ್ನು ಗಳಿಸಿದ್ದು, ನಡೆದ ಹಲವಾರು ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲುವೆ ಇದಕ್ಕೆ ಸಾಕ್ಷಿ ಎಂದರು.

ರಾಜ್ಯದಲ್ಲಿ ಮೈತ್ರಿ ಸರ್ಕಾರವು ಜನರ ಮೆಚ್ಚುಗೆ ಗಳಿಸಿದ್ದು ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸುಮಾರು 20 ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಚೌಕಿದಾರ ಯಾರ ಕಾವಲುಗಾರ? 

10 ಕೋಟಿ ಉದ್ಯೋಗ ಸೃಷ್ಟಿ ಬಗ್ಗೆ ಯಾಕೆ ಹೇಳುತ್ತಿಲ್ಲ? ಮತ್ತೆ ಯುವಕರಿಗೆ ಏನ್ ಮಾಡಿದ್ರಿ?  ಕಪ್ಪು ಹಣ ಬಗ್ಗೆ ರಾಷ್ಟ್ರೀಯ ಪಕ್ಷದಿಂದ ಸುಳ್ಳು ಪ್ರಚಾರ. ರೈತರ ಸಾಲ ಮನ್ನಾ ಮಾಡಲಿಲ್ಲ. ಗೊಬ್ಬರ ಬೆಲೆ ಕಡಿಮೆ ಮಾಡಿಲ್ಲ, ಅಗತ್ಯ ವಸ್ತುಗಳ ಬೆಲೆ 7 ರಿಂದ 70 % ಹೆಚ್ಚಾಗಿದೆ.‌ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಿಸೇಲ್ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ ಅದರೆ ಗ್ರಾಹಕರಿಗೆ ಲಭಿಸಲಿಲ್ಲ ಅಂದ್ರೆ ಸಾಮಾನ್ಯ ವರ್ಗದವರಿಗೆ ಜನ್ ಧನ್ ನಿಂದ ಹಣ ಸಿಗುವುದು ಎಂದು ಮೋದಿ ವಿರುದ್ಧ ವಾಗ್ಧಾಳಿ ನಡೆಸಿದರು.

ಅಚ್ಛೇ ದಿನ್ ಎಲ್ಲಿ?

ಎಸ್ ಇ‌ಪಿ, ಟಿಎಸ್ ಪಿಯಲ್ಲಿ ಸುಮಾರು 30 ಸಾವಿರ ಕೋಟಿ ವ್ಯಯ ಮಾಡಲಾಗುತ್ತಿದೆ. ಸುಪ್ರೀಂ ಕೋರ್ಟ್ ಮೀಸಲಾತಿ ತೆಗೆದಾಗ ಧ್ವನಿ ಎತ್ತಲಿಲ್ಲ. ಎಲ್ಲಾದ್ರೂ ಉಚಿತ ಅಕ್ಕಿ ವಿತರಣೆ ಮಾಡಿದ್ರಾ? ಹಾಗಾದ್ರೆ ಮಾಡಿದ್ದೇನು ?

ಹಿಂದುಳಿದವರಿಗೆ ಏನ್ ಮಾಡಿದ್ರು. ಏನ್ ಹೇಳಿದ್ರೋ?  ಹೇಳಿದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡ್ರು. ನೋಟು ಅಮಾನೀಕರಣದ ವೇಳೆ 46 ಲಕ್ಷ ಕೋಟಿ ರೂ. ಚಾಲನೆಯಲ್ಲಿತ್ತು. ಅದರಲ್ಲಿ ಶೇ99 ವಾಪಸ್ಸು ಬಂತು ಹಾಗಾದ್ರೆ ಕಪ್ಪು ಹಣವೆಲ್ಲಿ?  ಇದರಿಂದ ದೇಶದ ಆರ್ಥಿಕ ಪರಿಸ್ಥಿತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತೆ ಹೊರತು ಇನ್ನೇನು ಆಗಲಿಲ್ಲ.

ಪ್ರಧಾನಿ ಮೋದಿಯವರ ಮನ್ ಕೀ ಬಾತ್ ಅನ್ನು ವ್ಯಂಗ್ಯವಾಡಿ, ಕೇವಲ ಭಾವನಾತ್ಮಕ ವಿಷಯದಲ್ಲಿ ಚುನಾವಣೆ ನಡೆಸುತ್ತಾರೆ. ಸೈನಿಕರನ್ನು ಕಳಿಸುವಾಗ ದೇಶದ ಆಂತರಿಕ ಭದ್ರತೆಯಲ್ಲಿ ಲೋಪವಾಗಿದೆ, ಈ ಬಗ್ಗೆ ಯಾರ ವಿರುದ್ಧವೂ ಕ್ರಮ ಕೈಗೊಂಡಿಲ್ಲ ಏಕೆ ? ದೇಶದಲ್ಲಿ ಈಗಾಗಲೇ 12 ಸರ್ಜಿಕಲ್ ಸ್ಟ್ರೈಕ್ ನಡೆದಿದೆ, ಪಾಕಿಸ್ತಾನದ ಮೇಲೆ 4 ಯುದ್ಧಗಳು ಆಗಿವೆ. ಯಾವುದನ್ನೂ ಚುನಾವಣಾ ವಸ್ತು ವಿಷಯವಾಗಿ ಬಳಸಿಕೊಂಡಿಲ್ಲ,

ಒಂದು ದೇಶ ಹಾಗೂ ಒಂದು ಧರ್ಮ ಯಾಕೆ ಜಾರಿಗೊಳ್ಳಲಿಲ್ಲ. ಮಹಿಳಾ ಮೀಸಲಾತಿಯನ್ನ ಜಾರಿಗೊಳಿಸಲು ಹಿಂದೇಟು ಯಾಕೆ? ಒಬ್ಬರಿಗಾದರೂ ಮಹಿಳೆಯರಿಗೆ, ಹಿಂದುಳಿದವರಿಗೆ ಟಿಕೆಟ್ ನೀಡಿದ್ದಾರಾ ಹಾಗಾದ್ರೆ ಸಾಮಾಜಿಕ ನ್ಯಾಯವೆಲ್ಲಿ? ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದ್ರೆನು ಎಂದು ಪ್ರಶ್ನಿಸಿದರು?

ಐಟಿ ದಾಳಿಯನ್ನು ಮಾಡಿ ಕಪ್ಪು ಹಣ ತೆರಿಗೆ ವಂಚಿಸುವುದರನ್ನು ದಾಳಿ ಮಾಡಿ. ಚುನಾವಣಾ ಸಮಯವನ್ನೇ ಯಾಕೆ ಮಾಡಿದರು.ಯಡಿಯೂರಪ್ಪನವರ ಮನೆ ಮೇಲೆ ಯಾಕೆ ದಾಳಿ ಮಾಡಿಲ್ಲ. ಅವರೆಲ್ಲ ಹರಿಶ್ಚಂದ್ರ ನ ಮೊಮ್ಮಕ್ಕಳ ಸಿಟಿ ರವಿ ಶೋಭಾ. ಈಶ್ವರಪ್ಪ, ಅರವಿಂದ ಲಿಂಬಾವಳಿ ಮನೆ ಮೇಲೆ ದಾಳಿ ನಡೆಸಲಿ

ಚುನಾವಣಾ ವಿಷಯವಾದ ‘ರಾಮಮಂದಿರ’ :

ಕಳೆದ ಹನ್ನೊಂದು ವರ್ಷಗಳಲ್ಲಿ ಬಿಜೆಪಿ ಸರ್ಕಾರವು ಕೇಂದ್ರದಲ್ಲಿ ಆಡಳಿತ ನಡೆಸಿದ್ದು ಈ ಸಮಯದಲ್ಲಿ ರಾಮಮಂದಿರವನ್ನೇಕೆ ನಿರ್ಮಿಸಲಿಲ್ಲ ? ಎಂದು ಖಾರವಾಗಿ ಪ್ರಶ್ನಿಸಿ ಆದನ್ನು ಸದಾ ಚುನಾವಣಾ ವಸ್ತು ವಿಷಯವನ್ನಾಗಿಸುವ ಹುನ್ನಾರವನ್ನು ನಡೆಸುತ್ತಿದೆ ಎಂದು ಟೀಕೆ ಮಾಡಿದರು.

ಜಿಲ್ಲಾ ಪತ್ರಕರ್ತರ ಸಂಘದ ಅಧ‍್ಯಕ್ಷ ಸಿ.ಕೆ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್ ಬಾಬು, ನಗರ ಕಾರ್ಯದರ್ಶಿ ರಾಘವೇಂದ್ರ, ಉಪಾಧ್ಯಕ್ಷ ಸುಬ್ರಹ್ಮಣ್ಯ ಹಾಜರಿದ್ದರು. (ವರದಿ : ಕೆ.ಎಂ.ಆರ್)

ReplyForward

Leave a Reply

comments

Related Articles

error: