ಪ್ರಮುಖ ಸುದ್ದಿಮನರಂಜನೆ

ಪುಲ್ವಾಮಾ ದಾಳಿ ಹುತಾತ್ಮ ಯೋಧರ ಕುಟುಂಬಕ್ಕೆ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ರಿಂದ ಒಂದು ಕೋ.ರೂ.ಸಹಾಯ

ದೇಶ(ಮುಂಬೈ)ಏ.16:- ತನ್ನ ತಂದೆಯವರಾದ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಅವರ 77ನೇ ಪುಣ್ಯತಿಥಿಯ ಶುಭ ಸಂದರ್ಭದಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ 40ಯೋಧರ ಕುಟುಂಬಕ್ಕೆ ಸಹಾಯದ ರೂಪದಲ್ಲಿ ಒಂದು ಕೋಟಿ ರೂ.ನೀಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ತಮ್ಮ ವೈಯುಕ್ತಿಕ ಖಾತೆಯಿಂದ ನೀಡಲಿದ್ದು, ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರತಿಷ್ಠಾನ ಪ್ರಶಸ್ತಿ ಪ್ರಕಟಿಸುವ ವೇಳೆ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಅವರ ಮೊಮ್ಮಗ ಆದಿನಾಥ್  ಮಂಗೇಶ್ಕರ್ ಮಾಹಿತಿ ನೀಡಿದ್ದಾರೆ. ಇದಲ್ಲದೇ ಮಂಗೇಶ್ಕರ್ ಅವರು ತಮ್ಮ ಕಡೆಯಿಂದ ಹನ್ನೊಂದು ಲಕ್ಷರೂ.ದೇಣಿಗೆ ನೀಡಲಿದ್ದಾರೆ. ಈ ಕುರಿತು ನಡೆಸಿದ ಸುದ್ದಿಗೋಷ್ಠಿಯಲ್ಲಿ ಲತಾ ಮಂಗೇಶ್ಕರ್ ಅವರು ಗೈರಾಗಿದ್ದರು. ಆದರೆ ಅವರ ಸಹೋದರಿ ಉಷಾ ಮಂಗೇಶ್ಕರ್ ಮತ್ತು ಸಹೋದರ ಹೃದಯನಾಥ್ ಮಂಗೇಶ್ಕರ್ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ. (ಎಸ್.ಎಚ್)

Leave a Reply

comments

Related Articles

error: