ಮನರಂಜನೆ

‘ವೀಕೆಂಡ್ ವಿತ್ ರಮೇಶ್ 4’ ವೀರೇಂದ್ರ ಹೆಗ್ಗಡೆ ಮೊದಲ ಅತಿಥಿ: ಪ್ರೊಮೋ ಬಿಡುಗಡೆ

ಬೆಂಗಳೂರು,ಏ.16- ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಕಾರ್ಯಕ್ರಮಗಳಲ್ಲಿ ‘ವೀಕೆಂಡ್ ವಿತ್ ರಮೇಶ್’ ಕೂಡ ಒಂದು.

ಏ.20 ರಿಂದ ‘ವೀಕೆಂಡ್ ವಿತ್ ರಮೇಶ್ 4’ ಕಾರ್ಯಕ್ರಮ ಶುರುವಾಗುತ್ತಿದೆ. ಕಾರ್ಯಕ್ರಮದ ಮೊದಲ ಅತಿಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ವೀರೇಂದ್ರ ಹೆಗ್ಗಡೆ ಆಗಮಿಸಿದ್ದಾರೆ. ಕಾರ್ಯಕ್ರಮದ ಮೊದಲ ಪ್ರೊಮೋ ರಿಲೀಸ್ ಆಗಿದ್ದು, ಪ್ರೊಮೋ ಅದ್ಬುತವಾಗಿ ಮೂಡಿ ಬಂದಿದೆ.

ವೀರೇಂದ್ರ ಹೆಗ್ಗಡೆ ರವರ ಜೀವನ, ಕುಟುಂಬ, ಸ್ನೇಹಿತರು, ಮೊಮ್ಮಕ್ಕಳು, ಶಟಲ್ ಆಡುವುದು, ಕಾರ್ ಓಡಿಸುವುದು ಹೀಗೆ ಎಲ್ಲವೂ, ಎಲ್ಲರೂ ಸೇರಿ ಕಾರ್ಯಕ್ರಮ ಫುಲ್ ಮನರಂಜನೆ ನೀಡುವ ಸೂಚನೆ ನೀಡಿದ್ದಾರೆ. ಎಂದಿನಂತೆ ಕೆಲವು ಭಾವನಾತ್ಮಕ ಘಟನೆಗಳು ಸಹ ಕಾರ್ಯಕ್ರಮದಲ್ಲಿ ನಡೆದಿವೆ.

ಇದೇ ಶನಿವಾರ ಹಾಗೂ ಭಾನುವಾರ ಎರಡು ಸಂಚಿಕೆಗಳು ರಾತ್ರಿ 9.30ಕ್ಕೆ ಪ್ರಸಾರ ಆಗಲಿದೆ. ಎರಡನೇ ವಾರ ರಾಘವೇಂದ್ರ ರಾಜ್ ಕುಮಾರ್ ಹಾಗೂ ಪ್ರೇಮ ಅತಿಥಿಗಳಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: