ಮೈಸೂರು

ರಕ್ತದಾನದಿಂದ ಒಬ್ಬರ ಪ್ರಾಣ ರಕ್ಷಿಸಬಹುದು : ಸೋಮನಾಥ ಸ್ವಾಮೀಜಿ

ಮೈಸೂರಿನ  ಮಹಾತ್ಮಾಗಾಂಧಿ ರಸ್ತೆಯಲ್ಲಿರುವ ಜೆ.ಎಸ್.ಎಸ್.ಆಸ್ಪತ್ರೆಯ ಆವರಣದಲ್ಲಿರುವ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ಮಂಗಳವಾರ ಜಿ.ಟಿ.ದೇವೇಗೌಡರ ಅಭಿಮಾನಿಗಳ ಬಳಗ ವತಿಯಿಂದ ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಡಿ.ಹರೀಶ್ ಗೌಡ ಅವರ ಜನ್ಮದಿನದ ಪ್ರಯುಕ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಶಿಬಿರವನ್ನು ಆದಿಚುಂಚನಗಿರಿ ಶಾಖಾ ಮಠದ ಸೋಮನಾಥ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ರಕ್ತದಾನ ಸರ್ವಶ್ರೇಷ್ಠ ದಾನವಾಗಿದೆ. ರಕ್ತ ನೀಡುವ ಮೂಲಕ ಒಬ್ಬರ ಪ್ರಾಣವನ್ನು ರಕ್ಷಿಸಬಹುದು. ರಕ್ತ ನೀಡಿದರೆ ಆರೋಗ್ಯ ಎಲ್ಲಿ ಹಾಳಾಗುವುದೋ ಎಂಬ ಆತಂಕ ಹಲವರಲ್ಲಿ ಇರುತ್ತದೆ. ಆದರೆ ಆರೋಗ್ಯಕ್ಕೇನು ಆಗುವುದಿಲ್ಲ. ಒಬ್ಬರ ಪ್ರಾಣ ರಕ್ಷಿಸಿದ ಪುಣ್ಯ ಸಿಗುತ್ತದೆ ಎಂದರು. ರಕ್ತದಾನ ಶಿಬಿರ ಹಮ್ಮಿಕೊಳ್ಳುವ ಮೂಲಕ ಹುಟ್ಟುಹಬ್ಬವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ ಎಂದರು.

ಈ ಸಂದರ್ಭ ಚಿದಾನಂದ ಸ್ವಾಮೀಜಿ ಹಾಗೂ ಹರೀಶ್ ಗೌಡ ಅಭಿಮಾನಿಗಳ ಬಳಗದ ಸದಸ್ಯರು ಉಪಸ್ಥಿತರಿದ್ದರು. 50ಕ್ಕೂ ಅಧಿಕ ಮಂದಿ ಸ್ವಯಂಪ್ರೇರಿತರಾಗಿ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು.

Leave a Reply

comments

Related Articles

error: