ಪ್ರಮುಖ ಸುದ್ದಿಮೈಸೂರು

ನೇಕಾರರನ್ನು ಕಡೆಗಣಿಸಿರುವ ಮೈತ್ರಿ ಸರ್ಕಾರ : ನೇಕಾರರ ಮಹಾಸಭಾ

ಬಿಜೆಪಿ ಬೆಂಬಲಿಸಲು ನಿರ್ಧಾರ : ಸೋಮಶೇಖರ್

ಮೈಸೂರು,ಏ.16 : ಜವಳಿ ಖಾತೆಯನ್ನು ತಮ್ಮ ಬಳಿಯಿರಿಸಿಕೊಂಡಿರುವ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸೌಜನ್ಯಕ್ಕಾದರೂ ನೇಕಾರರ ಸಭೆ ನಡೆಸಿ, ನಮ್ಮ ಕಷ್ಟ ಕಾರ್ಪಣ್ಯಗಳನ್ನು ವಿಚಾರದೆ ಇರುವುದು ತೀವ್ರ ನೋವಾಗಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಮಹಾಸಭಾ ಅಧ್ಯಕ್ಷ ಬಿ.ಎಸ್.ಸೋಮಶೇಖರ್ ನುಡಿದರು.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಯಮದ ಸಬಲೀಕರಣಕ್ಕೆ ಯಾವೊಂದು ಯೋಜನೆಯನ್ನು ರೂಪಿಸದೇ ನೇಕಾರರನ್ನು ರಾಜ್ಯ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡಿದೆ, ಆದರೆ ಪ್ರಧಾನಿ ಮೋದಿಯವರು ತಮ್ಮ ಸಮುದಾಯವನ್ನು ಗುರುತಿಸಿ ‘ರಾಷ್ಟ್ರೀಯ ಕೈಮಗ್ಗ ದಿನ’ವನ್ನು ಘೋಷನೆ ಮಾಡಿದರು, 2015ರ ಆಗಸ್ಟ್ ನಲ್ಲಿ ಚೆನ್ನೈನಲ್ಲಿ ರಾಷ್ಟ್ರೀಯ ಕೈಮಗ್ಗ ದಿನಕ್ಕೆ ಚಾಲನೆ ನೀಡಲಾಯಿತು, ಮುದ್ರ ಯೋಜನೆ, ಗ್ಯಾಸ್ ಸಂಪರ್ಕ, ಅಟಲ್ ಪಿಂಚಣಿ ಯೋಜನೆ ಸೇರಿದಂತೆ ಹಲವಾರು ಯೋಜನೆಗಳನ್ನು ನೀಡಿದ ಮೋದಿ ನೇತೃತ್ವದ ಬಿಜೆಪಿಗೆ ಬೆಂಬಲ ನೀಡುತ್ತೇವೆ ಎಂದು ತಿಳಿಸಿದರು.

ಭಾರತವನ್ನ ಅಂತರರಾಷ್ಟ್ರೀಯಮಟ್ಟದಲ್ಲಿ ಉನ್ನತ ಸ್ಥಾನದಲ್ಲಿ ತಂದಿಟ್ಟು ಜಾಗತಿಕ ಮಟ್ಟದಲ್ಲಿ ಭಾರತೀಯರು ಎಂದ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಮಾಡಿದ್ದಾರೆ, ಅದರಂತೆ ಮಾಜಿ ಮುಖ್ಯಮಂತ್ರ ಬಿ.ಎಸ್.ಯಡಿಯೂರಪ್ಪ ನೇಕಾರರ ಸಾಲ ಮನ್ನಾ ಬಗ್ಗೆ ಪ್ರಸ್ತಾಪಿಸಿದ್ದರು, ಆದ್ದರಿಂದ ತಾವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೋದಿಯವರನ್ನು ಬೆಂಬಲಿಸುವ ನಿಟ್ಟಿನಲ್ಲಿ ಬಿಜೆಪಿಗೆ ಮತ ನೀಡುತ್ತೇವೆ ಎಂದು ಘೋಷಿಸಿದರು.

ಮಹಾಸಭಾದ ನಿರ್ದೇಶಕರಾದ ರಾಮಚಂದ್ರ, ಪರಂಧಾಮಯ್ಯ, ವೆಂಕಟೇಶ್, ರಾಧಾಕೃಷ್ಣ, ಲಕ್ಷ್ಮೀಕಾಂತ ಮೊದಲಾದವರು ಗೋಷ್ಠಿಯಲ್ಲಿ ಇದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: