ಮೈಸೂರು

ಕೇಂದ್ರ ಸರ್ಕಾರ ಜನರ ಮೂಲಭೂತ ಹಕ್ಕನ್ನು ಕಸಿಯುತ್ತಿದೆ : ಅಬ್ದುಲ್ ಮಜೀದ್ ಆರೋಪ

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಎಸ್.ಡಿ.ಪಿ.ಐ ವತಿಯಿಂದ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಮತ್ತು ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಮೈಸೂರಿನ ಗಾಂಧೀ ಚೌಕದಲ್ಲಿ  ಮಂಗಳವಾರ ಬೃಹತ್ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಎಸ್.ಡಿ.ಪಿ.ಐ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮಾತನಾಡಿ ಬಿಜೆಪಿ ನೇತೃತ್ವದ ಕೇಂದ್ರದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ನಿರಂತರವಾಗಿ ಜನ ಸಾಮಾನ್ಯರ ಮೇಲೆ ದುಷ್ಪರಿಣಾಮ ಬೀರುವಂತಹ ಜನವಿರೋಧಿ ನೀತಿಗಳನ್ನು ಬಹಳ ಚಾಣಾಕ್ಷತೆಯೊಂದಿಗೆ ಹೇರುತ್ತಿದೆ. ನೋಟು ಅನಾಣ್ಯೀಕರಣ ಮಾಡುವ ಮೂಲಕ ನಾಗರಿಕರ ಮೂಲಭೂತ ಹಕ್ಕಿನ ಮೇಲೆ ಭಾರೀ ಪ್ರಹಾರ ನಡೆದಿದ್ದು, ರಾಜ್ಯದಲ್ಲಿ  ಆರ್ಥಿಕ ತುರ್ತು ಪರಿಸ್ಥಿತಿ ಹೇರಿದಂತಾಗಿದೆ ಎಂದು ಆರೋಪಿಸಿದರು.

ಬಿಜೆಪಿಯು ನಿಜವಾಗಿಯೂ ಕಪ್ಪುಹಣದ ಕುರಿತು ಅತ್ಯಂತ ಗಂಭೀರ ಕಾಳಜಿ ವಹಿಸಿದ್ದಲ್ಲಿ ಅದು ಸ್ವತಃ ತನ್ನ ಪಕ್ಷದ ನಿಧಿಯ ಮೂಲವನ್ನು ಘೋಷಿಸಬೇಕಾಗಿತ್ತು. ಅಥವಾ ರಾಜಕೀಯ ಪಕ್ಷವನ್ನು ಆರ್.ಟಿ.ಐ ಅಡಿಯಲ್ಲಿ ಒಳಪಡಿಸುವ ಕಾನೂನನ್ನು ಜಾರಿಗೊಳಿಸಬೇಕಾಗಿತ್ತು ಎಂದರು. ರೈತರು, ಕಂಟ್ರಾಕ್ಟರ್ ಗಳು, ಉದ್ಯಮಿಗಳು, ಕಾರ್ಮಿಕರು, ಕಾರ್ಖಾನೆಗಳ ಮಾಲಿಕರು ಸರ್ಕಾರದ ದುಡುಕಿನ ನಿರ್ಧಾರದ ಬವಣೆಯನ್ನು ಹೊರುವಂತಾಗಿದೆ. ಸರ್ಕಾರ ಜನರ ಮೂಲಭೂತ ಹಕ್ಕನ್ನು ಕಸಿಯುತ್ತಿದೆ ಎಂದು ಆರೋಪಿಸಿದರು.

ಈ ಸಂದರ್ಭ ಎಸ್.ಡಿ.ಪಿ.ಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ರಾಜ್ಯ ಕಾರ್ಯದರ್ಶಿ ಅಫ್ಸರ್ ಕೆ, ರಿಯಾಜ್ ಫರಂಗಿಪೇಟೆ, ಜಿಲ್ಲಾಧ್ಯಕ್ಷ ಎಂ.ಎಫ್ ಕಲೀಂ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: