ಮನರಂಜನೆ

ಸಂಚಾರ ನಿಯಮ ಉಲ್ಲಂಘನೆ : ಬಾಲಿವುಡ್ ನಟ ಈಶಾನ್ ಖಟ್ಟರ್ ಗೆ ಬಿತ್ತು ದಂಡ !

ದೇಶ(ನವದೆಹಲಿ)ಏ.16:- ಸಂಚಾರ ನಿಯಮ ಉಲ್ಲಂಘಿಸಿದ ಬಾಲಿವುಡ್ ನಟ ಈಶಾನ್ ಖಟ್ಟರ್ ದಂಡ ಕಟ್ಟಿದ್ದಾರಂತೆ.

ತನ್ನ ಬೈಕ ನ್ನು ನೋ ಪಾರ್ಕಿಂಗ್ ವಲಯದಲ್ಲಿ ನಿಲ್ಲಿಸಿದ್ದು, ಬಾಂದ್ರಾಕ್ಕೆ ಊಟಕ್ಕೆ ತೆರಳಿದ್ದರಂತೆ. ಆದರೆ ಮರಳಿ ಬಂದಾಗ ಸ್ಥಳದಲ್ಲಿ ಬೈಕ್ ಇರಲಿಲ್ಲವಂತೆ. ಇದರ ನಂತರ  ಈಶಾನ್ ಸಂಚಾರ ನಿಯಮ ಉಲ್ಲಂಘಿಸಿದ್ದರ ಕುರಿತು ಪೊಲೀಸರಲ್ಲಿ ಕ್ಷಮೆ ಕೇಳಿದ್ದು, ತನ್ನ ಬೈಕ್ ನ್ನು ಮರಳಿಸುವಂತೆ ಕೇಳಿಕೊಂಡರಂತೆ. ಪೊಲೀಸರು ಬೈಕ್ ನ್ನೇನೋ ವಾಪಸ್ ನೀಡಿದರು. ಆದರೆ 500ರೂ.ದಂಡ ಹಾಕುವುದನ್ನು ಮಾತ್ರ ಬಿಡಲಿಲ್ಲ. 500ರೂ.ದಂಡ ಪಾವತಿಸಿದ ಬಳಿಕವಷ್ಟೇ ಬೈಕ್ ಸಿಕ್ಕಿದ್ದು, ದಂಡ ಪಾವತಿಸಿ, ಬೈಕ್ ಮರಳಿ ಪಡೆದರು ಎನ್ನಲಾಗಿದೆ. (ಎಸ್.ಎಚ್)

 

Leave a Reply

comments

Related Articles

error: