ಮೈಸೂರು

ತಾಯಿ-ಮಗು ನೇಣಿಗೆ ಶರಣು

ತಾಯಿ, ಮಗು ಇಬ್ಬರೂ ನೇಣಿಗೆ ಶರಣಾದ ಘಟನೆ  ತಿ.ನರಸೀಪುರ ತಾಲೂಕಿನಲ್ಲಿ ನಡೆದಿದೆ.

ಮೃತರನ್ನು  ಬನ್ನೂರು ಸಮೀಪದ ಚಾಮನಹಳ್ಳಿ ಗ್ರಾಮದ ನಿವಾಸಿ, ಭವ್ಯ ಹಾಗೂ ಆಕೆಯ ಮಗಳು ಗಗನಾ ಎಂದು ಗುರುತಿಸಲಾಗಿದೆ.

ಬನ್ನೂರಿನ ವಿವೇಕಾನಂದ ಶಾಲೆಯಲ್ಲಿ  ಶಿಕ್ಷಕಿಯಾಗಿರುವ ಭವ್ಯ ತನ್ನ ಒಂದೂವರೆ  ವರ್ಷದ ಮಗು ಗಗನಾಳಿಗೂ ನೇಣು ಬಿಗಿದಿದ್ದು, ಬಳಿಕ ತಾನೂ ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಭವ್ಯ ಪತಿ ದೇರಾಜೇಗೌಡ ಸಹ ಅದೇ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಟಿ.ನರಸೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಟಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: