ಮೈಸೂರು

ಭೀಕರ ರಸ್ತೆ ಅಪಘಾತ : ಮೂವರ ದುರ್ಮರಣ

ಟ್ಯಾಂಕರ್ ಮತ್ತು ಬೈಕ್ ನಡುವಿನ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹೆಚ್.ಡಿ.ಕೋಟೆ-ಹುಣಸೂರು ರಸ್ತೆಯ ಬೋಚಿಕಟ್ಟೆ ಬಳಿ  ಮಂಗಳವಾರ ಮಧ್ಯಾಹ್ನ ನಡೆದಿದೆ.

ಮೃತರನ್ನು ಹೆಚ್.ಡಿ.ಕೋಟೆ ತಾಲೂಕಿನ ನಂಜನಾಯಕನಹಳ್ಳಿ ಪಾಳ್ಯ ನಿವಾಸಿಗಳಾದ ಶ್ರೀನಿವಾಸ್(35), ಉಮಾ(30), ಚೈತ್ರ(9) ಎಂದು ಗುರುತಿಸಲಾಗಿದೆ. ಅಪಘಾತದ ತೀವ್ರತೆಗೆ  ತಂದೆ-ತಾಯಿ, ಪುಟ್ಟ ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹೆಚ್.ಡಿ.ಕೋಟೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: