ಪ್ರಮುಖ ಸುದ್ದಿ

ಮೈತ್ರಿ ಪಕ್ಷಕ್ಕೆ ಬಿಜೆಪಿ ಶಾಕ್ : ರಾತ್ರೋರಾತ್ರಿ 80ಕ್ಕೂ ಹೆಚ್ಚು ದಳಪತಿಗಳು ಬಿಜೆಪಿ ಸೇರ್ಪಡೆ

ರಾಜ್ಯ(ಚಿಕ್ಕಮಗಳೂರು)ಏ.17:- ಚಿಕ್ಕಮಗಳೂರಿನಲ್ಲಿ ರಾತ್ರೋರಾತ್ರಿ ಮೈತ್ರಿ ಪಕ್ಷಕ್ಕೆ   ಬಿಜೆಪಿ ಶಾಕ್ ನೀಡಿದೆ. ರಾತ್ರಿ ಬೆಳಗಾಗುವುದರೊಳಗೆ 80ಕ್ಕೂ ಹೆಚ್ಚು ದಳಪತಿಗಳು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

ಜೆಡಿಎಸ್ ನ ಖಾಂಡ್ಯಾ ಹೋಬಳಿಯ ಸಂದೇಶ್ ಗೌಡ ಬಿಜೆಪಿ ಸೇರ್ಪಡೆಗೊಂಡಿದ್ದು, ಚುನಾವಣೆಗೆ ಒಂದು ದಿನ ಬಾಕೀ ಇರುವಾಗಲೇ ಜೆಡಿಎಸ್ ಗೆ ಬಿಗ್ ಶಾಕ್ ನೀಡಿದೆ. ತಾಲೂಕು ಹಾಗೂ ಹೋಬಳಿ ಮಟ್ಟದ ಜೆಡಿಎಸ್ ಮುಖಂಡರು ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ಬೂತ್ ಮಟ್ಟದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಬಹುತೇಕ ಮಂದಿ ಬಿಜೆಪಿ ಸೇರಿದ್ದಾರೆ. ಮಾಜಿ ಶೃಂಗೇರಿ ಶಾಸಕ ಜೀವರಾಜ್ ನೇತೃತ್ವದಲ್ಲಿ ಸೇರ್ಪಡೆಗೊಂಡಿದ್ದು, ನಾಳೆ ಚುನಾವಣೆಯಿದ್ದು ಇವತ್ತು ಬಿಜೆಪಿ ಸೇರ್ಪಡೆಗೊಂಡ  ಹಿನ್ನಲೆಯಲ್ಲಿ  ಜೆಡಿಎಸ್ ತೀವ್ರ ಮುಜುಗರಕ್ಕೊಳಗಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: