ಮೈಸೂರು

ದಸರಾ ಆಹಾರ ಮೇಳ: ನಳಪಾಕ ಸ್ಪರ್ಧೆ ಹೆಸರು ನೋಂದಾಯಿಸಿಕೊಳ್ಳಲು ಸೆ. 27 ಕೊನೆ ದಿನ

ನಾಡಹಬ್ಬ ಮೈಸೂರು ದಸರಾ ಮಹೋತ್ಸವದಂಗವಾಗಿ ಜನಪ್ರಿಯ ಆಹಾರ ಮೇಳದಲ್ಲಿ ‘ಮೈಸೂರು ಊಟ’, ಬುಡಕಟ್ಟು ಸಿರಿಧಾನ್ಯ, ಹಸಿರು ತರಕಾರಿ ಆಹಾರ ತಯಾರಿಕಾ ‘ನಳಪಾಕ’ ಸ್ಪರ್ಧೆಯನ್ನು  ಅ.2 ರಿಂದ ಅ.9 ರ ವರೆಗೆ ಆಯೋಜಿಸಲಾಗಿದೆ.

ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ನಡೆಯಲಿರುವ ಸ್ಪರ್ಧೆಯಲ್ಲಿ ಅತ್ತೆ-ಸೊಸೆ, ಗಂಡ-ಹೆಂಡತಿ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತಿಯೊಂದು ವಿಭಾಗದಲ್ಲೂ ಪ್ರತ್ಯೇಕ ದಿನದಂದು ಸ್ಪರ್ಧೆಗಳು ಜರುಗುವವು.

ನಳಪಾಕ ಸ್ಪರ್ಧೆಗಳು  ಅ.2ರಂದು – “ಸಂಸಾರ ಸಾಗರ” ಅತ್ತೆ – ಸೊಸೆ ವಿಭಾಗದಲ್ಲಿ ಜೋಳದರೊಟ್ಟಿ ಮತ್ತು ಬದನೆಕಾಯಿ ಎಣ್ಣಗಾಯಿ ತಯಾರಿಸಬೇಕು. ಅ.3 – ನಳದಮಯಂತಿಯಲ್ಲಿ ಗಂಡ-ಹೆಂಡತಿ ಜೊತೆಗೂಡಿ ರಾಗಿ ರೊಟ್ಟಿ ಹುಚ್ಚೆಳ್ಳು ಚಟ್ನಿ. ಅ.4ರಂದು ಯುವ ದರ್ಶಿನಿಯಲ್ಲಿ ಯುವಕರು (ಇಬ್ಬರು) ಉಪ್ಪಿಟ್ಟು-ಕೇಸರಿಬಾತ್. ಯುವತಿಯರು ಪಲಾವ್ – ಕ್ಯಾರೆಟ್ ಹಲ್ವಾ ತಯಾರಿಸಬೇಕು ಅದರಂತೆ ಅ.5ರ ಧಾನ್ಯ ಸಿರಿಯಲ್ಲಿ ಸಾರ್ವಜನಿಕರು ಸಿರಿಧಾನ್ಯಗಳನ್ನು ಗುರುತಿಸಿ ಅಡುಗೆ ತಯಾರಿಸುವುದು. ಮತ್ತು ಅ. 6 ರಂದು 12 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಿರುವ ತರಕಾರಿ ಮತ್ತು ಹಣ್ಣುಗಳನ್ನು ಗುರುತಿಸುವ ‘ಹಸಿರು ಲೋಕ’ ಸ್ಪರ್ಧೆ. ಅದೇ ದಿನ ಹೋಟೆಲ್/ಕೇಟರರ್ಸ್ ಮತ್ತು ಕುಟುಂಬ ವರ್ಗದವರಿಗೆ ‘ನಾಟಿಲೋಕ’ ಸ್ಪರ್ಧೆಯಿದ್ದು ರಾಗಿ ಮುದ್ದೆ ಮತ್ತು ನಾಟಿ ಕೋಳಿ ಸಾರನ್ನು ತಯಾರಿಸಬೇಕು.

ವಿಶೇಷ ಸೂಚನೆ :

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಅವಶ್ಯವಿರುವ ಆಹಾರಧಾನ್ಯ, ಪಾತ್ರೆ, ಪರಿಕರ ತರಬೇಕು, ಗ್ಯಾಸ್ ಸ್ಟವ್ ಮತ್ತು ಗ್ಯಾಸ್ ಸಿಲಿಂಡರ್ ಅನ್ನು ಸಂಯೋಜಕರು ಒದಗಿಸುವರು. ಕಾಲೇಜು ವಿದ್ಯಾರ್ಥಿಗಳಿಗೆ ಗುರುತಿನ ಚೀಟಿ ಕಡ್ಡಾಯ. ಅತ್ತೆ-ಸೊಸೆ, ಗಂಡ-ಹೆಂಡತಿ ಸ್ಪರ್ಧೆಗಳಲ್ಲಿ ಭಾಗವಹಿಸುವವರು ವಿಳಾಸ ದೃಢೀಕರಣ ಪತ್ರ ನೀಡಬೇಕು. ಚಿತ್ರಕಲೆ ಸ್ಪರ್ಧೆಯಲ್ಲಿ ಭಾಗವಹಿಸುವ ಮಕ್ಕಳು ಅಗತ್ಯವಿರುವ ಪರಿಕರಗಳನ್ನು ಅವರೇ ತರಬೇಕು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಗುವುದು.

ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವವರು ಸೆ. 27ರ ಸಂಜೆ 5 ರ ಒಳಗೆ ಆರ್ಜಿ ಸಲ್ಲಿಸಬೇಕು. ನಮೂನೆಗಳನ್ನು ಆಹಾರ ಮೇಳ ಕಛೇರಿ (ಉಪನಿರ್ದೇಶಕರು, ಆಹಾರ, ಜಿಲ್ಲಾಧಿಕಾರಿಗಳ ಕಛೇರಿ) ಪಡೆಯಬಹುದು. ಅನಿಸಿಕೆ ಮತ್ತು ಸಮಸ್ಯೆಗಳನ್ನು ಇ-ಮೇಲ್ –[email protected]. ಮೂಲಕ ಹಂಚಿಕೊಳ್ಳಬಹುದು.

ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕಿ ಸರಳಾ ನಾಯರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರವಿಪ್ರಸನ್ನ, ಜಯಮ್ಮ, ಹಾಗೂ ಆಹಾರ ನಿರೀಕ್ಷಕಿ ಟಿ.ಜೆ.ಲಕ್ಷ್ಮೀ ಇವರಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9901942985, 9480835569, 9880817552 ಮತ್ತು 8123377872ನ್ನು ಸಂಪರ್ಕಿಸಬಹುದು.

Leave a Reply

comments

Related Articles

error: