ಪ್ರಮುಖ ಸುದ್ದಿ

ಗುಡುಗು,ಮಿಂಚು ಸಹಿತ ಗಾಳಿ ಮಳೆ ; 34 ಮಂದಿ ಸಾವು : ಪರಿಹಾರ ಧನ ಘೋಷಿಸಿದ ಪ್ರಧಾನಿ

ದೇಶ(ನವದೆಹಲಿ)ಏ.17:- ಗುಡುಗು-ಮಿಂಚು ಸಹಿತ ಗಾಳಿ ಮಳೆಗೆ ಮಧ್ಯಪ್ರದೇಶ, ರಾಜಸ್ಥಾನ್, ಗುಜರಾತ್ ಹಾಗೂ ಮಹಾರಾಷ್ಟ್ರಗಳಲ್ಲಿ ಸುಮಾರು 34ಮಂದಿ ಸಾವನ್ನಪ್ಪಿದ್ದು ಮೃತರ ಕುಟುಂಬಗಳಿಗೆ ಪ್ರಧಾನಿ ನರೇಂದ್ರ ಮೋದಿ ನೆರವು ಘೋಷಿಸಿದ್ದಾರೆ.

ಜಮುದೀನ್ ಸರ್ವಾರ್ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಸಿಡಿಲ ಬಡಿತಕ್ಕೆ ಸಾವನ್ನಪ್ಪಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮಧ್ಯಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಇಲ್ಲಿಯವರೆಗೆ ಹನ್ನೊಂದು ಮಂದಿ ಮೃತಪಟ್ಟಿದ್ದು, ಹಲವು ಮಣ್ಣಿನ ಮನೆಗಳು ಧರಾಶಾಹಿಯಾಗಿವೆ. ವಿವಿಧ ಗ್ರಾಮಗಳಲ್ಲಿ 15ಮಂದಿ ಭೀಕರ ಮಳೆಯಿಂದ ಗಾಯಗೊಂಡಿದ್ದಾರೆ. ಹಲವು ಮರಗಳು ಉರುಳಿಬಿದ್ದಿದ್ದು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ. ಗುಜರಾತ್ ನಲ್ಲೂ 9ಮಂದಿ ಸಾವಿಗೀಡಾಗಿದ್ದು, ಮೆಹಸಾನ ಜಿಲ್ಲೆಯಲ್ಲಿ 4, ಬನಸ್ಕಂತಾ ಜಿಲ್ಲೆಯಲ್ಲಿ 2, ರಾಜ್ ಕೋಟ್, ಮೊರ್ಬಿ ಸಬರ್ ಕಂತಾ ಜಿಲ್ಲೆಯಲ್ಲಿ ತಲಾ ಒಬ್ಬೊಬ್ಬರು ಚಂಡಮಾರುತಕ್ಕೆ ಬಲಿಯಾಗಿದ್ದಾರೆ. ಮಹಾರಾಷ್ಟ್ರದಲ್ಲಿ ಮಹಾ ಚಂಡಮಾರುತಕ್ಕೆ 7ಮಂದಿ ಬಲಿಯಾಗಿದ್ದಾರೆ. ರೈತರ ಬೆಳೆ ನಾಶವಾಗಿದೆ. ದಿಢೀರ್ ಬಂದ ಮಳೆಯಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತವಾಗಿದ್ದು, 300ಗ್ರಾಮಗಳು ಆಲಿಕಲ್ಲು ಮಳೆಗೆ ಹಾನಿಗೊಳಗಾಗಿವೆ.

ಅಕಾಲಿಕ ಮಳೆ ಮತ್ತು ಚಂಡಮಾರುತಕ್ಕೆ ತತ್ತರಿಸಿ ಪ್ರಾಣ ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಪ್ರಧಾನಿ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2ಲಕ್ಷರೂ.ಪರಿಹಾರ ಧನ ಘೋಷಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: