ಕರ್ನಾಟಕಪ್ರಮುಖ ಸುದ್ದಿ

ಕೋಲಾರ ಕ್ಷೇತ್ರದಲ್ಲಿ ಚುನಾವಣೆಗೂ ಮುನ್ನ 8 ಕಾಂಗ್ರೆಸ್ ನಾಯಕರ ಅಮಾನತು

ಕೋಲಾರ (ಏ.17): ಲೋಕಸಭಾ ಚುನಾವಣೆಗೆ ಒಂದು ದಿನ ಮೊದಲು ಕೋಲಾರ ಕಾಂಗ್ರೆಸ್ 8 ನಾಯಕರನ್ನು ಪಕ್ಷದಿಂದ ಅಮಾನತು ಮಾಡಿದೆ. ಇವರಲ್ಲಿ ಮುಳಬಾಗಿಲು ಜಿಲ್ಲಾ ಪಂಚಾಯಿತಿಯ ಮೂವರು ಸದಸ್ಯರು ಸೇರಿದ್ದಾರೆ. ಕೋಲಾರ ಕಾಂಗ್ರೆಸ್ ಅಧ್ಯಕ್ಷ ಕೆ.ಚಂದ್ರಾರೆಡ್ಡಿ ಅವರು 8 ನಾಯಕರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕೋಲಾರ ಲೋಕಸಭಾ ಕ್ಷೇತ್ರದ ಚುನಾವಣೆ ಏಪ್ರಿಲ್ 18ರ ಗುರುವಾರ ನಡೆಯಲಿದೆ.

ಪಕ್ಷ ವಿರೋಧಿ ಚಟುವಟಿಕೆ ಮತ್ತು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ವಿರುದ್ಧ ಪ್ರಚಾರ ನಡೆಸಿದ ಆರೋಪದ ಹಿನ್ನಲೆಯಲ್ಲಿ ಅಮಾನತುಗೊಳಿಸಲಾಗಿದೆ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರವಾಗಿ ಅವರು ಪ್ರಚಾರ ನಡೆಸುತ್ತಿದ್ದರು. ಮಂಡ್ಯದಲ್ಲಿಯೂ ಕಾಂಗ್ರೆಸ್ ಇದೇ ತಂತ್ರವನ್ನು ಅನುಸರಿಸಿತ್ತು. ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸುತ್ತಿದ್ದ ಏಳು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಅಮಾನತುಗೊಳಿಸಿತ್ತು.

ಅಮಾನತುಗೊಂಡವರು: ಪ್ರಕಾಶ್ ರಾಮಚಂದ್ರ (ಜಿ.ಪಂಚಾಯಿತಿ ಸದಸ್ಯ); ನಾಗಮಣಿ (ಜಿ.ಪಂಚಾಯಿತಿ ಸದಸ್ಯೆ); ಕೃಷ್ಣಪ್ಪ (ಜಿ.ಪಂಚಾಯಿತಿ ಸದಸ್ಯ); ವಿವೇಕಾನಂದ (ಎಪಿಎಂಸಿ ಸದಸ್ಯ); ಗಂಗಿ ರೆಡ್ಡಿ (ಪಿಎಲ್‌ಡಿ ಬ್ಯಾಂಕ್); ಶ್ರೀನಾಥ್ (ಪಿಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ); ಶ್ರೀನಿವಾಸ್ (ತಾ.ಪಂಚಾಯಿತಿ ಸದಸ್ಯ); ಮಂಜುನಾಥ್ (ಎಪಿಎಂಸಿ ಅಧ್ಯಕ್ಷ).

Leave a Reply

comments

Related Articles

error: