ಕರ್ನಾಟಕ

ವಿಕಲಚೇತನ ಮತದಾನಕ್ಕೆ ಗಾಲಿಕುರ್ಚಿ ವ್ಯವಸ್ಥೆ

ಹಾಸನ (ಏ.17): ಹಾಸನ ಲೋಕಸಭಾ ಚುನಾವಣೆಯಲ್ಲಿ ಮತದಾನದಲ್ಲಿ ಭಾಗವಹಿಸುವ ವಿಕಲಚೇತನರು ಹಾಗೂ ಹಿರಿಯ ನಾಗರಿಕರ ಸಹಾಯಕ್ಕಾಗಿ ಗಾಲಿಕುರ್ಚಿ, ಭೂತಗನ್ನಡಿ, ವಾಹನ ವ್ಯವಸ್ಥೆ ಕಲ್ಪಿಸಲಾಗಿರುತ್ತದೆ. ಅಲ್ಲದೇ ಇವರ ಸಹಾಯಕ್ಕಾಗಿ ಸ್ವಯಂ ಸೇವಕರನ್ನು ನೇಮಿಸಲಾಗಿದ್ದು, ವಿಕಲಚೇತನರು ಹಾಗೂ ಹಿರಿಯ ನಾಗರೀಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ವಿನಂತಿಸಿದ್ದಾರೆ.

ಪ್ರತಿ ಪಂಚಾಯಿತಿವಾರು ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು ಹಾಗೂ ತಾಲ್ಲೂಕು ಮಟ್ಟದಲ್ಲಿ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು ಕೆಲಸ ನಿರ್ವಹಿಸಲಿದ್ದಾರೆ. ಅಲ್ಲದೆ ಪ್ರತಿ ಮತಗಟ್ಟೆಯಲ್ಲೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸ್ವಯಂ ಸೇವಕರಾಗಿ ವಿಕಲಚೇತನರಿಗೆ ಹಾಗೂ ಹಿರಿಯನಾಗರಿಕರಿಗೆ ಸಹಾಯ ಮಾಡಲು ನೇಮಕವಾಗಿರುತ್ತಾರೆ.

ಈ ಎಲ್ಲಾ ಸೌಲಭ್ಯವನ್ನು ವಿಕಲಚೇತನ ಮತದಾರರು ಹಾಗೂ ಹಿರಿಯನಾಗರಿಕ ಮತದಾರರು ಪಡೆದುಕೊಳ್ಳಬೇಕಾಗಿ ವಿನಂತಿಸಲಾಗಿದೆ.

ಹಾಗೆಯೇ ಮೇಲ್ಕಂಡ ಸೌಲಭ್ಯಗಳ ಮಾಹಿತಿಗಾಗಿ ಹಾಸನ ಎಂ.ಆರ್.ಡಬ್ಲ್ಯೂ ಎನ್.ಆರ್. ಪ್ರಸನ್ನ (ಮೊ. 9964536271), ಚನ್ನರಾಯಪಟ್ಟಣ ಎಂ.ಆರ್. ಡಬ್ಲ್ಯೂ ಸುಬ್ರಮ್ಮಣ್ಯ (ಮೊ. 9731401621), ಅರಸೀಕೆರೆ ಎಂ.ಆರ್. ಡಬ್ಲ್ಯೂ, ಮಹಮ್ಮದ್ ಜುಬೇರ್ (ಮೊ.9902649777), ಹೊಳೆನರಸೀಪುರ ಎಂ.ಆರ್. ಡಬ್ಲ್ಯೂ ಕೆ.ಬಿ. ಹರೀಶ್ (ಮೊ. 9844229927), ಸಕಲೇಶಪುರ (ಮೊ. 9482262448), ಬೇಲೂರು ಎಂ.ಆರ್. ಡಬ್ಲ್ಯೂ ಬಿ.ವಿ. ಹರೀಶ್ (ಮೊ. 8861899350), ಆಲೂರು ಎಂ.ಆರ್. ಡಬ್ಲ್ಯೂ ಜಾಕೀರ್ (ಮೊ. 9844572560), ಅರಕಲಗೂಡು ಎಂ.ಆರ್. ಡಬ್ಲ್ಯೂ ಕೆ.ಎ. ಚಂದ್ರಶೇಖರ್ (ಮೊ. 9902757869) ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಎ.ಟಿ.ಮಲ್ಲೇಶ್ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳನ್ನು (ದೂರವಾಣಿ ಸಂಖ್ಯೆ 9448772080) ಇವರನ್ನು ಸಂಪರ್ಕಿಸಬಹುದಾಗಿದೆ. (ಎನ್.ಬಿ)

Leave a Reply

comments

Related Articles

error: