ಮೈಸೂರು

ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ 60ವರ್ಷ ಮೇಲ್ಪಟ್ಟ ವೃದ್ಧರು,ವಿಕಲಚೇತನರು, ಅಶಕ್ತರಿಗಾಗಿ ಉಚಿತ ಆಟೋ ಸೇವೆ

ಮೈಸೂರು,ಏ.17:-  ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ 60ವರ್ಷ ಮೇಲ್ಪಟ್ಟ ವೃದ್ಧರು,ವಿಕಲಚೇತನರು ಮತ್ತು ಅಶಕ್ತರಿಗಾಗಿ ಉಚಿತ ಆಟೋ ಸೇವೆಯನ್ನು ಕಲ್ಪಿಸಲಾಗಿದ್ದು. ಅದರ ಉದ್ಘಾಟನೆಯನ್ನು ಇಂದು ನೆರವೇರಿಸಲಾಯಿತು. ಉದ್ಘಾಟನೆ ನೆರವೇರಿಸಿ  ಮಾತನಾಡಿದ ಸಂಘದ ಅಧ್ಯಕ್ಷ  ಡಿ.ಟಿ ಪ್ರಕಾಶ್ ನಮ್ಮ ಬ್ರಾಹ್ಮಣ ಸಮುದಾಯದಲ್ಲಿ ಕಡ್ಡಾಯ ಮತದಾನದ ಪರಿಕಲ್ಪನೆ ದಿನೇ ದಿನೇ ಹೆಚ್ಚುತ್ತಿದ್ದು ಸಮಾಜದಲ್ಲಿನ ಹಿರಿಯ ನಾಗರೀಕರು ಮತ್ತು ವಿಕಲ ಚೇತನರು ,ಅಶಕ್ತರು ಮತದಾನದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಉಚಿತ ಆಟೋ ಸೇವೆಯನ್ನು ಒದಗಿಸಲಾಗಿದ್ದು ಸಮುದಾಯದಲ್ಲಿ ವೃದ್ಧರು ಹೆಚ್ಚಿದ್ದು ಜೊತೆಯಲ್ಲಿ ಯಾರೂ ಇಲ್ಲ ಎಂಬ ಕಾರಣಕ್ಕೆ ಮತದಾನದಿಂದ ಹೊರಗೆ ಉಳಿಯುವಂತಾಗಬಾರದು ಇದರ ಸದುಪಯೋಗ ಪಡಿಸಿಕೊಂಡು ಸಮುದಾಯದ ಶೇಕಡಾವಾರು ಮತದಾನ ಹೆಚ್ಚಿಸಲು ಅನುವುಮಾಡಿಕೊಡಬೇಕು ಮತ್ತು ಇದು ಪಕ್ಷಾತೀತವಾಗಿದೆ ಎಂದು ತಿಳಿಸಿದರು.

ಯುವ ಮುಖಂಡ ವಿಕ್ರಮ್ ಅಯ್ಯಂಗಾರ್ ಮಾತನಾಡಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ವೃದ್ಧರು ಅಶಕ್ತರು ಮತ್ತು ಹಲವರು ವೃದ್ಧಾಶ್ರಮದಲ್ಲಿ ಇರುವುದರಿಂದ , ಹಣವಿಲ್ಲದೇ ಮತಗಟ್ಟೆಗೆ ಹೋಗದೆ  ಇರುವವರು ಈ ಕಾರಣದಿಂದ ಮತದಾನದಿಂದ ಹೊರಗುಳಿಯದಿರಲಿ ಎಂದು ಈ ಸೌಲಭ್ಯ ಒದಗಿಸಲಾಗಿದೆ.  ಎಲ್ಲ ಹಿರಿಯ ನಾಗರೀಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಂಡು ದೇಶದ ಒಳಿತಿಗಾಗಿ ಮತಚಲಾಯಿಸುವಂತೆ ಮನವಿ ಮಾಡಿಕೊಂಡರು. ಆಟೋ ಚಾಲಕರನ್ನು ಸಂಪರ್ಕಿಸುವ ಮೊಬೈಲ್  9449223254, 9845148233 ಎಂದು ತಿಳಿಸಿದರು.

ಈ ಸಂದರ್ಭ   ಅಪೂರ್ವ ಸುರೇಶ್, ಜಯಸಿಂಹ ಶ್ರೀಧರ್,ಕಡಕೊಳ ಜಗದೀಶ್,ತೇಜಸ್ ಶಂಕರ್,ಪ್ರಶಾಂತ್ ಭಾರದ್ವಾಜ್,ಅಜಯ್ ಶಾಸ್ತ್ರಿ, ಆಟೋ ಚಾಲಕರಾದ ಆನಂದ್,ಮರಿಯಪ್ಪ  ಮುಂತಾದವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: